ಫಾರ್ಮಹೌಸ್‌ನಲ್ಲಿದ್ದ 1.49 ಲಕ್ಷ ರೂ. ಮೌಲ್ಯದ 10 ಕುರಿಗಳ ಕಳ್ಳತನ

maxresdefault
Published on

ರಾಣೆಬೆನ್ನೂರ: ಫಾರ್ಮಹೌಸ್‌ನ ಬೀಗ ಮುರಿದು 1.49 ಲಕ್ಷ ರೂ. ಮೌಲ್ಯದ 10 ಕುರಿಗಳನ್ನು ಕಳ್ಳತನ ಮಾಡಿದ ಘಟನೆ ತಾಲೂಕಿನ ಕೂನಬೇವು ಪ್ಲಾಟ್‌ನಲ್ಲಿ ಶನಿವಾರ ರಾತ್ರಿ ಸಂಭವಿಸಿದೆ.
ಗ್ರಾಮದ ಸಂತೋಷ ನಾಗಪ್ಪ ಕರಡಿ (32) ಎಂಬುವರ ಕುರಿಗಳು ಕಳ್ಳತನವಾಗಿರುವುದು.
ಇವರು ತಮ್ಮ ಫಾರ್ಮಹೌಸ್‌ನಲ್ಲಿ 12 ಕುರಿಗಳನ್ನು ಸಾಕಿದ್ದರು. ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಫಾರ್ಮಹೌಸ್‌ನ ಬೀಗ ಮುರಿದು ಅದರಲ್ಲಿದ್ದ 10 ಕುರಿಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ ಎನ್ನಲಾಗಿದೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net