ಸತತ ಮಳೆಯಿಂದ ರೈತರಿಗೆ ಆತಂಕ

Mane kusita
Published on

ಲಕ್ಷ್ಮೇಶ್ವರ: ಸೋಮವಾರವೂ ಮಳೆ ಮುಂದುವರಿದಿದೆ. ಸತತ ಮಳೆಯಿಂದ ಬೆಳೆಹಾನಿ, ರೋಗಬಾಧೆಗೆ ತುತ್ತಾಗುವ, ಕಳೆ ಹೆಚ್ಚಾಗುವ ಆತಂಕ ರೈತರನ್ನು ಕಾಡುತ್ತಿದೆ.

ಧಾರವಾಡ, ಹಾವೇರಿ ಜಿಲ್ಲೆಯ ಶಾಲೆಗಳಿಗೆ ರಜೆ ಘೋಷಿಸಿದ್ದರಿಂದ ಗದಗ ಜಿಲ್ಲೆಯಲ್ಲಿಯೂ ರಜೆ ಘೋಷಿಸಬಹುದು ಎಂದು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನಿರೀಕ್ಷಿಸಿದ್ದರು. ಆದರೆ, ರಜೆ ಘೋಷಿಸದಿರುವ ಕಾರಣ ಮಕ್ಕಳು, ಶಿಕ್ಷಕರು ಮಳೆಯಲ್ಲಿಯೇ ಶಾಲೆಯತ್ತ ಸಾಗಿದರು.
ಸೋಮವಾರ ಕೃಷಿ ಚಟುವಟಿಕೆ ಇಲ್ಲದ್ದರಿಂದ ಗ್ರಾಮೀಣ ಭಾಗದ ಜನರು ಪಟ್ಟಣಕ್ಕೆ ಆಗಮಿಸಿದ್ದರಿಂದ ಮಾರುಕಟ್ಟೆ ಪ್ರದೇಶ ಜನದಟ್ಟಣೆಯಿಂದ ಕೂಡಿತ್ತು.

ಪಟ್ಟಣ ಸೇರಿ ತಾಲೂಕಿನಾದ್ಯಂತ ಮನೆಗಳ ಕುಸಿತದ ಸಂಖ್ಯೆ ಹೆಚ್ಚಾಗುತ್ತಿದೆ. ಯಳವತ್ತಿ, ಗೊಜನೂರ, ಬಾಲೇಹೊಸೂರ, ಹುಲ್ಲೂರ, ಬಡ್ನಿ, ಸೂರಣಗಿ, ಶಿಗ್ಲಿ ಸೇರಿ ಹತ್ತಾರು ಕಡೆ ಮನೆಗಳು ಕುಸಿದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net