ಸಭೆಯಿಂದ ಜಾಗ ಖಾಲಿ ಮಾಡಿದ ರೈತರು

27 09 205_BNG_RURAL_PAGE_2
ಸೋಂಪುರ ಹೋಬಳಿಯ ಹೊಸಪಾಳ್ಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭೂಸ್ವಾಧಿನ ಪ್ರಕ್ರಿಯೆ ದರ ನಿಗದಿ ಸಭೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ವಿಶೇಷ ಭೂಸ್ವಾಧಿನ ಅಧಿಕಾರಿ ರುನಂದನ್​, ಎಸ್​ಎಲ್​ಒ ಶಿವನಗೌಡ, ಅಭಿವೃದ್ಧಿ ಅಧಿಕಾರಿ ಲೀಲಾವತಿ, ಇನ್​ಸ್ಪೆಕ್ಟರ್​ ರಾಜು ಸಿದ್ದರಾಜು ಇದ್ದರು.
Published on

ದಾಬಸ್​ಪೇಟೆ : ಕರ್ನಾಟಕ ಕೈಗಾರಿಕಾ ಪ್ರದೇಶದ ನೆಲಮಂಗಲ ತಾಲೂಕು ಸೋಂಪುರ ಹೋಬಳಿಯ ಹೊಸಪಾಳ್ಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭೂಸ್ವಾಧಿನ ಪ್ರಕ್ರಿಯೆ ದರ ನಿಗದಿ ಸಭೆಯಲ್ಲಿ ಅಧಿಕಾರಿಗಳು ಹಾಗೂ ರೈತರ ನಡುವಿನ ಮಾತುಕತೆ ವೇಳೆ ಸಹಮತ ವ್ಯಕ್ತವಾಗದ ಹಿನ್ನೆಲೆಯಲ್ಲಿ ಸಭೆ ನಡುವೆಯೇ ಹಲವು ರೈತರು ಜಾಗ ಖಾಲಿ ಮಾಡಿದ ಪ್ರಸಂಗ ನಡೆಯಿತು.

ಸೋಂಪುರ ಹೋಬಳಿಯ 7 ನೇ ಹಂತದ ಕಂಬಾಳು, ಕಾಸರಟ್ಟ, ಟ್ಟೆಹೊಸಳ್ಳಿ, ಮಾಚನಹಳ್ಳಿ ಗ್ರಾಮದ ಸುಮಾರು 444.31 ಎಕರೆ ಭೂಸ್ವಾಧಿನಕ್ಕೆ ಸಂಬಂಧಪಟ್ಟಂತೆ ಕರೆಯಲಾಗಿದ್ದ ಸಭೆಯಲ್ಲಿ ರೈತರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಬರೀ ಮಧ್ಯವರ್ತಿಗಳ ಜಾಲವಾಗಿದೆ, ಕಾಸರಟ್ಟ, ಕಂಬಾಳು ಗ್ರಾಮಗಳು ಜಲಾನಯನ ಪ್ರದೇಶಕ್ಕೆ ಒಳಪಟ್ಟಿದ್ದು ಅವುಗಳನ್ನು ಸ್ವಾಧಿನ ಮಾಡಿಕೊಳ್ಳಲು ನಿಮಗೆ ಅಧಿಕಾರವಿದೆಯೇ ಎಂದು ಪ್ರಶ್ನಿಸಿದ ರೈತರು ಸ್ವಾಧಿನವಾದರೆ ಪ್ರತಿ ಕಾರ್ಖಾನೆಯಿಂದ ಕೊಳವೆಬಾವಿ ಕೊರೆಯಲಾಗುತ್ತದೆ ಇದರಿಂದ ನೀರಿನ ಅಭಾವ ಹೆಚ್ಚುತ್ತದೆ ಇದಕ್ಕೆ ಯಾರೂ ಜವಾಬ್ದಾರಿ ಎಂದು ಪ್ರಶ್ನೆಗಳ ಸುರಿಮಳೆ ಸುರಿಸಿದರು.

ಮಾನದಂಡ ಏನು?: ಭಾರತೀಯ ಕಿಸಾನ್​ ಸಂದ ರಾಜ್ಯ ಕಾರ್ಯಕಾರಿ ಸದಸ್ಯ ಕಾಸರಟ್ಟ ಗಂಗಾಧರ್​ ಮಾತನಾಡಿ, ರೈತರು ವ್ಯವಸಾಯ ಮಾಡಿ ಜೀವನ ಸಾಗಿಸುತ್ತಾರೆ, ಆದರೆ ನೀವು ಜಮೀನನ್ನು ಸ್ವಾಧಿನ ಮಾಡಿದರೆ ನಾವುಗಳು ಯಾವ ರೀತಿ ಜೀವನ ಮಾಡಬೇಕು ಇದರಿಂದ ನಮಗೆ ಸಮಸ್ಯೆಯಾಗುತ್ತದೆ ಎಂದು ಸಿಟ್ಟು ತೋಡಿಕೊಂಡರು. ನೀವು ಪುಡಿಗಾಸು ಕೊಡುತ್ತೀರಾ... ಇದರಿಂದ ಬೇರೆ ಕಡೆ ಜಮೀನನ್ನು ಖರೀದಿಸಲು ಆಗುವುದಿಲ್ಲ ಬೇರೆ ಕಡೆ ಎಕರೆಗೆ 2 ಕೋಟಿ ರೂಪಾಯಿಗಿಂತ ಹೆಚ್ಚು ಕೇಳುತ್ತಾರೆ ನೀವು ನಿಗಧಿ ಮಾಡುವ ದರವೆಷ್ಟು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದು ಕುಮದ್ವತಿ ಜಲನಯನ ಪ್ರದೇಶವಾದ್ದರಿಂದ ನೀವು ಯಾವ ಮಾನದಂಡದ ಮೇಲೆ ಸ್ವಾಧಿನ ಮಾಡುತ್ತೀರ ಎಂದು ಪ್ರಶ್ನಿಸಿದರು.

ಸಭೆಯಿಂದ ನಿರ್ಗಮನ : ಸಭೆಯ ಮುಖ್ಯ ಉದ್ದೇಶ ಈ ಭಾಗದ ಭೂಸ್ವಾಧಿನದ ಜಮೀನುಗಳಿಗೆ ದರ ನಿಗದಿ ಮಾಡುವುದಾಗಿದೆ. ನಾಲ್ಕೂ ಗ್ರಾಮದ ಜಮೀನುಗಳಿಗೆ ಏಕದರ ಇರಲಿದೆ, ಎಕರೆಗೆ 1.60 ಕೋಟಿ ರೂ ನಿಗದಿ ಮಾಡಲಾಗುವುದು ಎಂದು ವಿಶೇಷ ಭೂಸ್ವಾಧಿನ ಅಧಿಕಾರಿ ರುನಂದನ್​ ತಿಳಿಸಿದರು. ಇದಕ್ಕೆ ರೈತರು ಆಕ್ಷೇಪ ವ್ಯಕ್ತಪಡಿಸಿ ಸಭೆಯಿಂದ ನಿರ್ಗಮಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net