

ತಾವರಗೇರಾ: ಕಳೆದ 15 ದಿನಗಳಿಂದ ಮೋಡ ಮುಸುಕಿದ ವಾತಾವರಣವಿದ್ದು, ಮಳೆ ಬೀಳುವ ಸಾಧ್ಯತೆ ದಟ್ಟವಾಗಿದೆ. ಹೀಗಾಗಿ ಹೋಬಳಿಯ 42 ಗ್ರಾಮಗಳ ರೈತರು ಪಟ್ಟಣದ ಸಂಪರ್ಕ ಕೇಂದ್ರಕ್ಕೆ ಸೋಮವಾರ ಭೇಟಿ ನೀಡಿ ಬಿತ್ತನೆ ಬೀಜ ಖರೀದಿಗೆ ಮುಂದಾಗಿದ್ದಾರೆ.
ಕಳೆದ 15-20ದಿನಗಳಲ್ಲಿ 23,880 ಕೆಜಿ ತೊಗರಿ ಬೀಜ ಮಾರಾಟವಾಗಿದ್ದು 700 ಕೆಜಿ ದಾಸ್ತಾನಿದೆ. ಸಜ್ಜಿ 5120 ಕೆಜಿ ಖರೀದಿಯಾಗಿದ್ದು, 2560 ಕೆಜಿ ಉಳಿದಿದೆ. ಮೆಕ್ಕೆಜೋಳ 3080 ಕೆ.ಜಿ. ಕೊಂಡಿದ್ದು, 300 ಕೆಜಿ ಸಂಗ್ರಹವಿದೆ. ಹೆಸರು ಬೀಜ 300 ಕೆಜಿ ಮಾರಾಟವಾಗಿದ್ದು 200 ಕೆಜಿ ಬೀಜ ದಾಸ್ತಾನಿದೆ ಎಂದು ಕೃಷಿ ಇಲಾಖೆ ಅಧಿಕಾರಿ ಆಶಾ ರಾಠೋಡ ತಿಳಿಸಿದ್ದಾರೆ.