ಆರೋಗ್ಯದತ್ತ ಗಮನಹರಿಸದ ರೈತರು

13 HRS 01
ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ದೇಗುಲ ಆವರಣದಲ್ಲಿ ಆರೋಗ್ಯ ಉಚಿತ ತಪಾಸಣಾ ಶಿಬಿರ ನಡೆಯಿತು. ಕೆ.ಜೆ.ಶಿವನಂಜೇಗೌಡ, ಡಾ.ವೇಣು, ಡಾ.ಗೋವಾರ್ಧನ್, ಡಾ.ಎಸ್.ಎನ್.ವಾಸುದೇವನ್, ಡಾ.ಎ.ನಟರಾಜ್, ಡಾ.ವಿಶ್ವನಾಥ್ ಅಂಗಡಿ, ಡಾ.ಗೀತಾ ಗೋವಿಂದ್, ಟಿ.ತಿಮ್ಮೇಗೌಡ ಇದ್ದರು.
Published on

ಹಿರೀಸಾವೆ: ಸದಾ ಕೃಷಿ ಚಟುವಟಿಕೆಯಲ್ಲಿ ತೊಡಗುವ ರೈತರು ತಮ್ಮ ಆರೋಗ್ಯದತ್ತ ಹೆಚ್ಚು ಗಮನ ಹರಿಸುತ್ತಿಲ್ಲ ಎಂದು ಹಾಸನದ ರಾಜೀವ್ ಆಯುರ್ವೇದ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ ತಜ್ಞ ವೈದ್ಯ ಡಾ.ವೇಣು ಹೇಳಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಕಾರೇಕೆರೆ ಕೃಷಿ ಮಹಾವಿದ್ಯಾಲಯ ಹಾಗೂ ಹಾಸನದ ರಾಷ್ಟ್ರೀಯ ಸೇವಾ ಯೋಜನಾ ಘಟಕ ವತಿಯಿಂದ ಬುಧವಾರ ಹೋಬಳಿಯ ಕಬ್ಬಳಿ ಶ್ರೀ ಬಸವೇಶ್ವರಸ್ವಾಮಿ ದೇಗುಲ ಆವರಣದಲ್ಲಿ ಆಯೋಜಿಸಿದ್ದ ಆರೋಗ್ಯ ಉಚಿತ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ದಿನವಿಡೀ ಜಮೀನಿನಲ್ಲಿ ದುಡಿಯುವ ರೈತರು ತಮ್ಮ ಆರೋಗ್ಯದಲ್ಲಿ ವ್ಯತ್ಯಯ ಕಂಡು ಬಂದಾಗಲೂ ನಿರ್ಲಕ್ಷೃ ವಹಿಸಿ ಸುಮ್ಮನಾಗುವುದು ಅಪಾಯಕಾರಿ ಸಂಗತಿ. ವರ್ಷದಲ್ಲಿ 2 ರಿಂದ 3 ಬಾರಿ ತಮ್ಮ ಆರೋಗ್ಯವನ್ನು ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ ಎಂದು ಕಿವಿಮಾತು ಹೇಳಿದರು.

ಶಿಬಿರದಲ್ಲಿ ಮಧುಮೇಹ, ರಕ್ತದೊತ್ತಡ, ಕೀಲು ಮತ್ತು ಮೂಳೆ, ಕಣ್ಣು, ಕಿವಿ ಸೇರಿದಂತೆ ವಿವಿಧ ತಪಾಸಣಾ ಕಾರ್ಯ ನಡೆಯಿತು. 300 ಕ್ಕೂ ಹೆಚ್ಚು ಜನರು ತಪಾಸಣೆ ಮಾಡಿಸಿಕೊಂಡರು. 230 ಶಿಬಿರಾರ್ಥಿಗಳು ಪಾಲ್ಗೊಂಡಿದ್ದರು. ಕಬ್ಬಳಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಜೆ.ಶಿವನಂಜೇಗೌಡ, ತಜ್ಞ ವೈದ್ಯ ಡಾ.ಗೋವಾರ್ಧನ್, ಶಿಬಿರಾಧ್ಯಕ್ಷ ಡಾ.ಎಸ್.ಎನ್.ವಾಸುದೇವನ್, ಶಿಬಿರದ ಯೋಜನಾಧಿಕಾರಿಗಳಾದ ಡಾ.ಎ.ನಟರಾಜ್, ಡಾ.ವಿಶ್ವನಾಥ್ ಅಂಗಡಿ, ಡಾ.ಗೀತಾ ಗೋವಿಂದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net