ಎತ್ತು, ಚಕ್ಕಡಿಯೊಂದಿಗೆ ತಹಸೀಲ್ದಾರ್ ಕಚೇರಿಗೆ ಬಂದ ರೈತರು

8srt-1- bjp protest
Published on

ಶಿರಹಟ್ಟಿ: ಬರಪೀಡಿತ ತಾಲೂಕು ಘೊಷಣೆ, ರೈತರ ಪಂಪ್​ಸೆಟ್​ಗಳಿಗೆ ಸಮರ್ಪಕ ವಿದ್ಯುತ್ ಪೂರೈಕೆ, ಮುಂಗಾರು ಬೆಳೆ ಹಾನಿ ಪರಿಹಾರ ಸೇರಿ ಇತರ ಬೇಡಿಕೆಗಳ ಈಡೇರಿಕೆ ಹಾಗೂ ರೈತಪರ ಯೋಜನೆ ರದ್ದು ಮಾಡಿರುವ ಕಾಂಗ್ರೆಸ್ ಸರ್ಕಾರದ ನೀತಿ ಖಂಡಿಸಿ ಶಿರಹಟ್ಟಿಯಲ್ಲಿ ಬಿಜೆಪಿ ಹಾಗೂ ರೈತಪರ ಸಂಘಟನೆ ಕಾರ್ಯಕರ್ತರು ಶುಕ್ರವಾರ ಎತ್ತು, ಚಕ್ಕಡಿಯೊಂದಿಗೆ ತಹಸೀಲ್ದಾರ್ ಕಚೇರಿಗೆ ಆಗಮಿಸಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.


ಈ ವೇಳೆ ಶಿರಹಟ್ಟಿ ಬಿಜೆಪಿ ಮಂಡಲ ಅಧ್ಯಕ್ಷ ಫಕೀರೇಶ ರಟ್ಟಿಹಳ್ಳಿ, ಶಂಕರ ಮರಾಠೆ ಮಾತನಾಡಿ, ಮುಂಗಾರು ಮಳೆ ಅಭಾವದಿಂದ ಹೆಸರು, ಶೇಂಗಾ, ಗೋವಿನಜೋಳ, ಹತ್ತಿ ಬೆಳೆ ಶೇ. 80ರಷ್ಟು ನಾಶವಾಗಿದೆ. ಇದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಿದ್ಯುತ್ ಲೋಡ್ ಶೆಡ್ಡಿಂಗ್ ಪರಿಣಾಮ ಜಮೀಣಿನಲ್ಲಿನ ಬೆಳೆಗಳು ಒಣಗಲಾರಂಭಿಸಿವೆ. ರೈತರು ನಿರೀಕ್ಷಿಸಿದ ಫಸಲು ಕೈ ಸೇರಲಾಗದ ಪರಿಸ್ಥಿತಿ ನಿರ್ವಣವಾಗಿದೆ ಎಂದು ದೂರಿದರು.


ಮನವಿ ಸ್ವೀಕರಿಸಿದ ತಹಸೀಲ್ದಾರ್ ಅನಿಲ ಬಡಿಗೇರ, ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದರು.


ಈ ವೇಳೆ ಶಿರಹಟ್ಟಿ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಸಂತೋಷ ಓಬಾಜಿ, ರೈತಪರ ಸಂಘಟನೆ ಅಧ್ಯಕ್ಷ ಮಂಜನಗೌಡ ಕೆಂಚನಗೌಡ್ರ, ವಸಂತ ಬಂಡಿವಡ್ಡರ, ಜಾನು ಲಮಾಣಿ, ಚೆನ್ನವೀರಪ್ಪ ಹೂಗಾರ, ದೇವರಾಜ ಮೇಟಿ, ಪ್ರವೀಣಗೌಡ ಪಾಟೀಲ, ರಾಜೀವರಡ್ಡಿ ಬಮ್ಮನಕಟ್ಟಿ, ಶಿವಯೋಗಿ ಬಳ್ಳಾರಿ, ರಾಮನಗೌಡ ಪಾಟೀಲ, ರವಿ ಹಳ್ಳಿ, ರಾಮು ಕಂಬಳಿ, ರಘುನಾಥಗೌಡ ಪಾಟೀಲ, ಈರಣ್ಣ ಕಲ್ಯಾಣಿ, ಬಸವರಾಜ ಚಿಕ್ಕತೋಟದ, ಸುರೇಶ ಮಾಂಡ್ರೆ, ತಿಪ್ಪಣ್ಣ ಲಮಾಣಿ, ಬಸವರಾಜ ಪೂಜಾರ ಮಹೇಶ ಕಲ್ಲಪ್ಪನವರ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net