ಸಹಕಾರ ಕ್ಷೇತ್ರದ ಪ್ರಗತಿಯಿಂದ ರೈತರ ಕಲ್ಯಾಣ

Tke 3
Published on

ತರೀಕೆರೆ: ಸಹಕಾರ ಕ್ಷೇತ್ರದ ಪ್ರಗತಿಯಿಂದ ರೈತರ ಕಲ್ಯಾಣವಾಗಲಿದೆ ಎಂದು ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್.ಸುರೇಶ್ ಹೇಳಿದರು. ಅಜ್ಜಂಪುರ ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ನೂತನವಾಗಿ ಸ್ಥಾಪಿಸಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವನ್ನು ಉದ್ಘಾಟಿಸಿ ಮಾತನಾಡಿ, ಪಿಎಸಿಎಸ್‌ನಲ್ಲಿ ರೈತರಿಗೆ ಸಾಲಸೌಲಭ್ಯ ಕೊಡಿಸಿಕೊಡುವುದು ಮಾತ್ರವಲ್ಲ, ವಿವಿಧ ವಹಿವಾಟುಗಳ ಮೂಲಕ ಲಾಭದ ಮಾರ್ಗ ಕಂಡುಕೊಳ್ಳಬೇಕು. ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್ ಜಿಲ್ಲೆಯ ಎಲ್ಲ ಪಿಎಸಿಎಸ್‌ಗಳಿಗೆ ಸಾಲ ಮತ್ತು ಅಗತ್ಯ ಸವಲತ್ತು ನೀಡುತ್ತಿದ್ದು, ಉತ್ತಮಲಾಭದ ಮೂಲಕ ಸುಸಜ್ಜಿತ ಕಟ್ಟಡ ನಿರ್ಮಿಸಿದೆ ಎಂದರು.

ಮಾಜಿ ಶಾಸಕ ಎಸ್.ಎಂ.ನಾಗರಾಜ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ಆರ್.ಆನಂದಪ್ಪ, ತರೀಕೆರೆ ಪಿಕಾರ್ಡ್ ಬ್ಯಾಂಕ್ ನಿರ್ದೇಶಕ ಯೋಗೀಶ್, ಪಿಎಸಿಎಸ್ ಅಧ್ಯಕ್ಷ ನಾಗರಾಜಪ್ಪ, ಉಪಾಧ್ಯಕ್ಷ ರಾಜಪ್ಪ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net