ರೈತ ಧ್ವನಿ, ಮಿಲ್ ಮಾಲೀಕರ ಸಂಧಾನ ವಿಫಲ

RAITHA
ಕೋಟ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರೈತ ಧ್ವನಿ ಸಂಘ ಕೋಟ ಮತ್ತು ಮಿಲ್ ಮಾಲೀಕರ ನಡುವೆ ಭತ್ತದ ದರದಲ್ಲಿನ ಪರಿಷ್ಕರಣೆ ಬಗ್ಗೆ ಸಭೆ ನಡೆಯಿತು
Published on

ಕೋಟ: ಕೋಟ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ರೈತ ಧ್ವನಿ ಸಂಘ ಕೋಟ ಮತ್ತು ಮಿಲ್ ಮಾಲೀಕರ ನಡುವೆ ಭತ್ತದ ದರ ಪರಿಷ್ಕರಣೆ ಬಗ್ಗೆ ಸಭೆ ನಡೆಯಿತು.

ನ.4ರಂದು ಭತ್ತದ ದರ ಹೆಚ್ಚಳಕ್ಕೆ ಆಗ್ರಹಿಸಿ ರೈತ ಧ್ವನಿ ಸಂಘ ಕೋಟ ತೆಕ್ಕಟ್ಟೆ ಮಿಲ್ ಎದುರುಗಡೆ ಪ್ರತಿಭಟನೆಗೆ ನಿರ್ಧರಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ರೈತರನ್ನು ಮತ್ತು ಮಿಲ್ ಮಾಲೀಕರನ್ನು ಪೊಲೀಸ್ ಠಾಣೆಯಲ್ಲಿ ಸೌಹಾರ್ದದ ಮೂಲಕ ವಿವಾದ ಬಗೆಹರಿಸಲು ಡಿವೈಎಸ್‌ಪಿ ಮತ್ತು ಸರ್ಕಲ್ ಇನ್‌ಸ್ಪೆಕ್ಟರ್ ಸಮಕ್ಷಮ ಮಾತುಕತೆಗೆ ಆಹ್ವಾನಿಸಲಾಗಿತ್ತು.

ಮಿಲ್ ಮಾಲೀಕರ ಸಂಘ ಅಧ್ಯಕ್ಷ ರಮೇಶ್ ನಾಯಕ್ ದರ ಹೆಚ್ಚಿಸುವ ಬಗ್ಗೆ ಅಸಹಾಯಕತೆ ತೋರಿಸಿದ್ದು, ರೈತರನ್ನು ಕೆರಳಿಸಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಅರಿತ ಪೊಲೀಸ್ ಅಧಿಕಾರಿಗಳು ರೈತರನ್ನು ಸಮಾಧಾನಿಸಿ ಒಂದೆರಡು ದಿನದಲ್ಲಿ ಎಲ್ಲ ಮಿಲ್ ಮಾಲೀಕರನ್ನು ಕರೆದು ರೈತರ ಬೇಡಿಕೆ ಸಾಧ್ಯವಾದಷ್ಟು ಮಟ್ಟದಲ್ಲಿ ಪರಿಹಾರ ಮಾಡಲು ಪ್ರಯತ್ನ ಮಾಡಲಾಗುವುದು ಎನ್ನುವ ಭರವಸೆ ನೀಡಿದರು. ಎರಡು ದಿನದಲ್ಲಿ ಸಮಸ್ಯೆ ಬಗೆಹರಿಯದಿದ್ದಲ್ಲಿ ನಿಗದಿತ ದಿನದಂದು ಪ್ರತಿಭಟನೆ ನಡೆಸುವುದು ಅನಿವಾರ್ಯ ಎಂದು ರೈತರು ತಿಳಿಸಿದ್ದಾರೆ. ಉಡುಪಿ ಪೊಲೀಸ್ ಉಪ ವರಿಷ್ಠಾಧಿಕಾರಿ ಪ್ರಭು ಡಿ.ಟಿ, ಬ್ರಹ್ಮಾವರ ವೃತ್ತನಿರೀಕ್ಷಕ ದಿವಾಕರ್ ಪಿ.ಎಂ. ಕೋಟ ಠಾಣಾಧಿಕಾರಿ ರಾಘವೇಂದ್ರ ಎಸ್., ರೈತ ಧ್ವನಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಕೋಟ, ಕೃಷಿ ಭೂಮಿ ಸಂರಕ್ಷಣಾ ಸಮಿತಿ ಚಿತ್ರಪಾಡಿ ಕಾರ್ಕಡ ಸದಸ್ಯರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net