ಶೀಘ್ರವೇ ಸಕ್ಕರೆ ಕಾರ್ಖಾನೆ ಆರಂಭಿಸಿ: ಮದ್ದೂರು ರೈತ ಸಂಘದಿಂದ ಮನವಿ

Farmers union request to start sugar factory Mandya
Published on

ಮಂಡ್ಯ: ಕಬ್ಬು ಬೆಳೆಗಾರರ ಹಿತದೃಷ್ಟಿಯಿಂದಾಗಿ ಕೊಪ್ಪ ಎನ್.ಎಸ್.ಎಲ್ ಹಾಗೂ ಕೆ.ಎಂ.ದೊಡ್ಡಿಯ ಚಾಂಷುಗರ್ ಕಾರ್ಖಾನೆಯನ್ನು ಶೀಘ್ರವೇ ಪ್ರಾರಂಭಿಸಬೇಕೆಂದು ಒತ್ತಾಯಿಸಿ ರೈತ ಸಂಘ ಮತ್ತು ಹಸಿರು ಸೇನೆಯ ಮದ್ದೂರು ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು.

ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಕಾರ್ಯಕರ್ತರು ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರಿಗೆ ಮನವಿ ಸಲ್ಲಿಸಿದರು. ಮದ್ದೂರು ತಾಲೂಕು ವ್ಯಾಪ್ತಿಯಲ್ಲಿ ಈಗಾಗಲೇ 15 ತಿಂಗಳ ಕಬ್ಬು ಉಳಿದುಕೊಂಡಿದೆ. ಒಂದು ವೇಳೆ ಕಾರ್ಖಾನೆ ಆರಂಭವಾಗುವುದು ತಡವಾದರೆ ಇಳುವರಿ ಕಡಿಮೆಯಾಗಲಿದೆ. ಅರೆ ನೀರಾವರಿಯಾಗಿರುವ ಕಾರಣ ಬೆಳೆ ಮೇಲೆ ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕಳೆದ ಹಂಗಾಮಿನ ಕಬ್ಬನ್ನು ನುರಿಸಬಹುದಾಗಿದೆ. ಕಾರ್ಖಾನೆಗಳು ಜನವರಿಯಲ್ಲಿ ಕಬ್ಬು ಅರೆಯುವುದನ್ನು ನಿಲ್ಲಿಸಿದ ಪರಿಣಾಮ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದಲ್ಲದೆ ಬರದಿಂದ ಇನ್ನಷ್ಟು ನಷ್ಟವಾಗಿದೆ. ಆದ್ದರಿಂದ ಈಗಾಗಲೇ ಕೊಟ್ಟಿರುವ ಆದೇಶಕ್ಕಿಂತಲೂ ಮುಂಚಿತವಾಗಿ ಕಬ್ಬು ನುರಿಸುವುದನ್ನು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

ಜಿಲ್ಲಾಧ್ಯಕ್ಷ ಇಂಡುವಾಳು ಬಸವರಾಜು, ಸೊ.ಸಿ.ಪ್ರಕಾಶ್, ಮಹೇಂದ್ರ, ರಾಮಕೃಷ್ಣಯ್ಯ, ಶ್ರೀನಿವಾಸ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net