ರಸ್ತೆ ಸಂಚಾರ ತಡೆದು ರೈತ ಸಂಘ ಪ್ರತಿಭಟನೆ

ಕರ್ನಾಟಕ ರಾಜ್ಯ ರೈತ ಸಂಘದ ಸದಸ್ಯರು ಕೊಳ್ಳೇಗಾಲದ ಮುಡಿಗುಂಡ ಬಳಿ ಹೆದ್ದಾರಿ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ವೀರಭದ್ರಸ್ವಾಮಿ, ಉಪಾಧ್ಯಕ್ಷ ಸಿದ್ದರಾಜು ನಾಯಕ, ಮಂಜುನಾಥ್, ರಘು, ಮಾದಪ್ಪ, ಬಿ.ವೈ.ಲಿಂಗರಾಜು, ದಿಲೀಪ್, ಕೊಂಗರಹಳ್ಳಿ ಸಿದ್ದಪ್ಪ, ಪವನ್, ರೇಚಣ್ಣ, ನವೀನ್ ಇದ್ದರು.

Published on

ಕೊಳ್ಳೇಗಾಲ: ಇತ್ತೀಚೆಗೆ ಜಿಲ್ಲಾ ಕೇಂದ್ರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕೃತಜ್ಞತಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ರೈತರು ಹಾಗೂ ಸಾರ್ವಜನಿಕರು ಸಲ್ಲಿಸಿದ್ದ ಮನವಿ ಪತ್ರವನ್ನು ಬಿಸಾಕಿ ಹೋಗಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಯಿತು.

ಪಟ್ಟಣದ ಮುಡಿಗುಂಡ ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ತಡೆದು ರೈತ ಸಂಘದ ಪದಾಧಿಕಾರಿಗಳು ಆಕ್ರೋಶ ಹೊರಹಾಕಿದರು.
ರೈತ ಸಂಘದ ರಾಜ್ಯ ಸಲಹಾ ಸಮಿತಿ ಅಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ರೈತ-ಪ್ರಗತಿಪರ ಸಂಘಟನೆಗಳು ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ನೀಡಿದ್ದ ಮನವಿ ಅರ್ಜಿಯನ್ನು ಬಿಸಾಡಿ ಹೋಗಿರುವ ಸಿಎಂ ಸಿದ್ದರಾಮಯ್ಯ ಅವರ ನಡೆ ಖಂಡನೀಯ. ಪ್ರಜೆಗಳಾದ ನಾವು ಅವರಿಗೆ ಅಧಿಕಾರ ಕೊಟ್ಟಿದ್ದೇವೆ. ಪ್ರಜೆಗಳೆಂದರೆ ಸಿಎಂ ಏನೆಂದು ತಿಳಿದಿದ್ದಾರೆ. ಅಧಿಕಾರ ಯಾರಿಗೂ ಶಾಶ್ವತವಲ್ಲ. ಸಮಸ್ಯೆಗಳ ಅರ್ಜಿಯನ್ನು ಪಡೆದು ಬಿಸಾಡಿ ಹೋಗಿರುವುದು ಸರಿಯಲ್ಲ. ಈ ಕೂಡಲೇ ಸಿದ್ದರಾಮಯ್ಯ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ವೀರಭದ್ರಸ್ವಾಮಿ, ಉಪಾಧ್ಯಕ್ಷ ಸಿದ್ದರಾಜು ನಾಯಕ, ಮಂಜುನಾಥ್, ರಘು, ಮಾದಪ್ಪ, ಬಿ.ವೈ.ಲಿಂಗರಾಜು, ದಿಲೀಪ್, ಕೊಂಗರಹಳ್ಳಿ ಸಿದ್ದಪ್ಪ, ಪವನ್, ರೇಚಣ್ಣ, ನವೀನ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net