

ಧಾರವಾಡ: ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಿ ಬೆಳೆ ಪರಿಹಾರ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಹಸೀಲ್ದಾರ್ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.
ಸಂಘದ ಜಿಲ್ಲಾಧ್ಯಕ್ಷ ಕಲ್ಮೇಶ ಲಿಗಾಡೆ, ಕಾರ್ಯಕರ್ತರಾದ ಮಾರುತಿ ಸುಂಕದ, ರಮೇಶ ಕಿತ್ತೂರ, ಚನ್ನಬಸಪ್ಪ ಹಡಪದ, ಚಂದ್ರಶೇಖರ ಕಬ್ಬೂರ, ಅಮೃತ ಕಮಾರ, ಸುಭಾಸ ಮಾದಣ್ಣವರ, ಇತರರಿದ್ದರು.