ವಿವಿಧ ಬೇಡಿಕೆ ಈಡೇರಿಕೆಗೆ ರೈತ ಸಂಘ ಆಗ್ರಹ

IMG20240913171653.jpg
Published on

ಬೆಳಗಾವಿ: ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದಿಂದ ಗುರುವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು. ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡಬೇಕು. ಸರ್ಕಾರ ನಿಗದಿಪಡಿಸಿದ ಸೋಯಾಬೀನ್ ಬೆಲೆ ರೀತಿಯಲ್ಲಿಯೇ ಹೋಬಳಿ ಮಟ್ಟದಲ್ಲಿ ಖರೀದಿ ಕೇಂದ್ರ ತೆರೆಯಬೇಕು. ರೈತರ ಜಮೀನುಗಳಿಗೆ ಹೋಗಲು ರಸ್ತೆ ನಿರ್ಮಿಸಬೇಕು. ಬ್ಯಾಂಕ್‌ನವರು ರೈತರ ಬೆಳೆಸಾಲ ವಸೂಲಾತಿ ನಿಲ್ಲಿಸಬೇಕು ಎಂದು ಮನವಿ ಮೂಲಕ ಆಗ್ರಹಿಸಿದರು. ಹೆಸ್ಕಾಂ ಅಕ್ರಮ-ಸಕ್ರಮ ನಿಲ್ಲಿಸಿರುವುದರಿಂದ ರೈತರಿಗೆ ಅನನುಕೂಲವಾಗಿದ್ದು ಇದನ್ನು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮೊದಲಿನಂತೆ ರೈತರಿಗೆ ಅನುಕೂಲ ಮಾಡಿಕೊಡಬೇಕು. ಸವದತ್ತಿ ತಾಲೂಕಿನ ಹೊಸೂರು ಮತ್ತು ಮಾಟೋಳ್ಳಿ ಗ್ರಾಮದ ರೈತರ ಜಮೀನಿಗೆ ರಸ್ತೆ ಹಾಗೂ ನೀರಿನ ಕಾಲುವೆಗುಂಟ ರಸ್ತೆ ನಿರ್ಮಿಸಬೇಕು ಎಂದು ಒತ್ತಾಯಿಸಿದರು. ಬಸವರಾಜ ಡೊಂಗರಗಾವಿ, ಅಖೀಲಸಾಬ ಮುನವಳ್ಳಿ, ಬಸವರಾಜ ಹಿತ್ತಲಮನಿ, ಬಸವರಾಜ ಹಣ್ಣಿಕೇರಿ, ಸೋಮಶೇಖರ ವಿವೇಕಿ, ವಿನಯ ಬೆಂಡಿಗೇರಿ, ಮಹಾಂತೇಶ ಕಮತ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net