

ಹೊಸಪೇಟೆ: ಆಲಮಟ್ಟಿ ಜಲಾಶಯದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ವೇಳೆ ರೈತರಿಗೆ ಅಗೌರವ ತೋರಿದ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ಕೃಷ್ಣಾ ಭಾಗ್ಯ ಜಲ ನಿಗಮದ ಅಧ್ಯಕ್ಷ ಸ್ಥಾನ ಹಾಗೂ ಸಚಿವ ಸ್ಥಾನದಿಂದ ವಜಾ ಗೊಳಿಸಬೇಕು ಎಂದು ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ(ವಾಸುದೇವ ಮೇಟಿ ಬಣ) ಒತ್ತಾಯಿಸಿದೆ.
ಈ ಕುರಿತು ಮಂಗಳವಾರ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿ, ವಿಜಯಪುರ ಜಿಲ್ಲೆಯ ಕೃಷ್ಣಾ ಭಾಗ್ಯ ಜಲ ನಿಗಮದ ಆಲಮಟ್ಟಿ ಕಾರ್ಯಾಲಯದಲ್ಲಿ ಸೋಮವಾರ ನೀರಾವರಿ ಸಲಹಾ ಸಮಿತಿ ಸಭೆ ಕರೆಯಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಸಚಿವ ಆರ್.ಬಿ.ತಿಮ್ಮಾಪುರ ಹಾಗೂ ಇನ್ನಿತರ ಸಚಿವರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಮತ್ತು ಅಧಿಕಾರಿಗಳು ಮಾತ್ರ ಭಾಗವಹಿಸಿದ್ದರು. ಈ ಸಭೆಗೆ ೮ ರೈತರು ಮುಖಂಡರು ಭಾಗವಹಿಸಲು ಸರ್ಕಾರದಿಂದ ಅವಕಾಶವಿದೆ.
ಆದರೆ, ಸೋಮವಾರ ನಡೆದ ಸಭೆಗೆ ರೈತ ಮುಖಂಡರನ್ನು ಹೊರಗೆ ಕಳುಹಿಸಿ, ಬಾಗಿಲು ಹಾಕಿ ಸಭೆ ನಡೆಸಿದ್ದು ಅಕ್ಷಮ್ಯ ಅಪ ರಾಧ ಮತ್ತು ಇದನ್ನು ಪ್ರಶ್ನೆ ಮಾಡಿದ ರೈತ ಮುಖಂಡರಿಗೆ ಏಕವಚನದಲ್ಲಿ ಸಚಿವ ಆರ್.ಬಿ.ತಿಮ್ಮಾಪುರ ಅಸಡ್ಡೆ ಭಾಷೆಯನ್ನು ಬಳಸಿದ್ದು ಖಂಡನೀಯ. ರೈತ ವಿರೋಧಿ ಧೋರಣೆ ತಳೆದಿರುವ ಸಚಿವರನ್ನು ಕೂಡಲೇ ಸಚಿವ ಸಂಪುಟದಿAದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಆಲಮಟ್ಟಿ ಜಲಾಶಯ ವ್ಯಾಪ್ತಿಯ ಎಂಟು ಜಿಲ್ಲೆಗಳು ಸಂಪೂರ್ಣ ಬರಗಾಲದಿಂದ ಕೂಡಿದೆ, ಸಭೆಯಲ್ಲಿ ವಾರಬಂದಿಯAತೇ ೧೪ ದಿನ ಚಾಲು, ೧೦ ದಿನ ಬಂದ್ ಈ ನೀತಿಯನ್ನು ಯಾವುದೇ ಚರ್ಚೆ ಇಲ್ಲದೆ ಏಕಪಕ್ಷೀಯವಾಗಿ ತೀರ್ಮಾನ ತೆಗೆದುಕೊಂಡಿದ್ದಾ ರೆ. ವಾರ ಬಂದಿಯನ್ನು ಬದಲಾಯಿಸಿ ೭ ದಿನ ಸಮಾನವಾಗಿ ಮಾಡಬೇಕು. ೧೦ ದಿನ ಬಂದಾದ ನಂತರ ಕಾಲುವೆಗೆ ಮರು ನೀರು ಬಿಟ್ಟರೆ ಕೊನೆಯ ಭಾಗಕ್ಕೆ ನೀರು ಬರುವುದಕ್ಕೆ ಸುಮಾರು ೨ ರಿಂದ ೩ ದಿನ ಕಾಲವಕಾಶ ಬೇಕಾಗುತ್ತದೆ. ಇದರಿಂದ ರೈತರ ಬೆಳೆ ಸಂಪೂರ್ಣ ಒಣಗುತ್ತದೆ. ಈಗಾಗಲೇ ಹತ್ತಿ ಮೆಣಸಿನಕಾಯಿ, ಕೆಟ್ಟು ಮೆಕ್ಕೆಜೋಳ ಅನೇಕ ರೈತರು ಬಿತ್ತನೆ ಮಾಡಿದ ಬೆಳೆಗಳು ಒಣಗಿ ಹೋಗುತ್ತಿವೆ. ಸೋಮವಾರ ನಡೆದ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಏಕಪಕ್ಷೀಯ ನಿರ್ಧಾರ ವನ್ನು ತೆಗೆದುಕೊಂಡ ಸಚಿವ ಆರ್.ಬಿ. ತಿಮ್ಮಾಪುರ ಅವರನ್ನು ಅಧ್ಯಕ್ಷತೆಯಿಂದ ತೆರವುಗೊಳಸಬೇಕು ಹಾಗೂ ಸಂಪುಟದಿAದ ಕೈಬಿಡಬೇಕು. ಇಲ್ಲದೆ ಹೋದಲ್ಲಿ ರಾಜ್ಯಾದ್ಯಂತ ಚಳವಳಿ ತಿವ್ರಗೋಳಿಸುತ್ತೆವೆ ಎಂದು ಎಚ್ಚರಿಸಿದರು.
ಅಧ್ಯಕ್ಷ ಸಿ.ಎ.ಗಾಳೆಪ್ಪ, ರಾಜ್ಯ ಉಪಾಧ್ಯಕ್ಷ ಎಂ. ಪ್ರಕಾಶ್, ಮರಿಯಮ್ಮನಹಳ್ಳಿ ಹೋಬಳಿ ಗೌರವಾಧ್ಯಕ್ಷ ವೆಂಕಟೇಶ, ಕಮಲಾಪುರ ಹೋಬಳಿ ಅಧ್ಯಕ್ ನಾಗರಾಜ, ಪ್ರಮುಖರಾದ ಪಂಪಾಪತಿ, ಫಕ್ಕೀರಪ್ಪ, ಮಲ್ಲಪ್ಪ ಇದ್ದರು.