

ರಾಣೆಬೆನ್ನೂರ: ಬೆಳೆಗಳಿಗೆ ನೀರು ಹಾಯಿಸಲು ತುಂಗಭದ್ರಾ ನದಿಪಾತ್ರದಲ್ಲಿ ಅಳವಡಿಸಿದ್ದ 1.10 ಲಕ್ಷ ರೂ. ಮೌಲ್ಯದ 5 ರೈತರ ಪಂಪಸೆಟ್ಗಳನ್ನು ಯಾರೋ ಖದೀಮರು ದೋಚಿರುವ ಘಟನೆ ತಾಲೂಕಿನ ಚಿಕ್ಕಕುರುವತ್ತಿ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಗ್ರಾಮದ ಶಿವನಗೌಡ ಕೆಂಪಗೌಡ್ರ, ರಮೇಶ ಕೆಂಪಗೌಡ್ರ, ಮಲ್ಲಿಕಾರ್ಜುನ ಬಿದರಿ, ನಿಂಗಪ್ಪ ಮಾದರ ಹಾಗೂ ಚನ್ನಪ್ಪ ಚನ್ನಗೌಡ್ರ ಎಂಬುವರಿಗೆ ಸೇರಿ ಐದು ಪಂಪಸೆಟ್ಗಳನ್ನು ದೋಚಲಾಗಿದೆ.
ಇವರು ಬೆಳೆಗಳಿಗೆ ನೀರು ಹಾಯಿಸಲು ನದಿಪಾತ್ರದಲ್ಲಿ ಅಳವಡಿಸಿದ್ದ ಪಂಪಸೆಟ್ಗಳನ್ನು ಯಾರೋ ದುಷ್ಕಮಿರ್ಗಳು ದೋಚಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.