ಅಸಮರ್ಪಕ ವಿದ್ಯುತ್‌ನಿಂದ ರೈತರಿಗೆ ಸಂಕಷ್ಟ

ಅಳವಂಡಿ ಜೆಸ್ಕಾಂ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಚಂದ್ರಪ್ಪ ಮೇಟಿ, ಚನ್ನಪ್ಪ ಮುತ್ತಾಳ, ರಮೇಶ ಸಂಗಣ್ಣವರ, ವೀರಯ್ಯ, ಮಲ್ಲಪ್ಪ ಮೆಕ್ಕಿ, ಶಿವಲಿಂಗಪ್ಪ ಮೇಟಿ ಇತರರಿದ್ದರು.
ಅಳವಂಡಿ ಜೆಸ್ಕಾಂ ಕಚೇರಿ ಮುಂದೆ ರೈತರು ಪ್ರತಿಭಟನೆ ನಡೆಸಿದರು. ಪ್ರಮುಖರಾದ ಚಂದ್ರಪ್ಪ ಮೇಟಿ, ಚನ್ನಪ್ಪ ಮುತ್ತಾಳ, ರಮೇಶ ಸಂಗಣ್ಣವರ, ವೀರಯ್ಯ, ಮಲ್ಲಪ್ಪ ಮೆಕ್ಕಿ, ಶಿವಲಿಂಗಪ್ಪ ಮೇಟಿ ಇತರರಿದ್ದರು.
Published on

ಅಳವಂಡಿ: ಅಳವಂಡಿ, ಬೈರಾಪುರ ಸೇರಿ ವಿವಿಧ ಗ್ರಾಮದ ರೈತರು ಸಮರ್ಪಕ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಗ್ರಾಮದ ಜೆಸ್ಕಾಂ ಕಚೇರಿ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

2-3 ದಿನಗಳಿಂದ ರೈತರ ಪಂಪ್‌ಸೆಟ್‌ಗೆ ಅಸಮರ್ಪಕ ವಿದ್ಯುತ್ ಸರಬರಾಜಿನಿಂದ 5-10 ನಿಮಿಷಕ್ಕೊಮ್ಮೆ ಕಡಿತಗೊಳ್ಳುತ್ತಿದೆ. ಇದರಿಂದ ಜಮೀನಿನ ಪಂಪ್‌ಸೆಟ್ ಹಾಗೂ ಮೋಟಾರ್‌ಗಳು ಸುಟ್ಟು ಬೆಳೆಗಳಿಗೆ ನೀರು ಹರಿಸಲಾಗುತ್ತಿಲ್ಲ. ವಿದ್ಯುತ್‌ಗಾಗಿ ಜಮೀನಿನಲ್ಲಿ ಕಾಯುವ ಪರಿಸ್ಥಿತಿ ಉಂಟಾಗಿದೆ. ಬೆಳೆಗಳು ಬಾಡುತ್ತಿವೆ ಎಂದು ರೈತರು ಅಳಲುತೊಡಿಕೊಂಡರು.

ಬೆಟಗೇರಿ ಜೆಸ್ಕಾಂ ಎಸ್‌ಒ ಭೀಮಾನಾಯಕ ಮಾತನಾಡಿ, ಕಳೆದ 2 ದಿನದಿಂದ ಭಾರಿ ಗಾಳಿ ಬೀಸುತ್ತಿದ್ದು, ವಿದ್ಯುತ್ ತಂತಿ ಪಕ್ಕದ ಗಿಡಗಳಿಂದ ವಿದ್ಯುತ್ ಪೂರೈಕೆ ಸಮಸ್ಯೆಯಾಗುತ್ತಿದೆ. ಈ ಕುರಿತು ಕ್ರಮ ಕೈಗೊಂಡು ರೈತರಿಗೆ ಸಮರ್ಪಕ ವಿದ್ಯುತ್ ಪೂರೈಸಲಾಗುವುದು ಎಂದು ಭರವಸೆ ನೀಡಿದ್ದರಿಂದ ಪ್ರತಿಭಟನೆ ಹಿಂಪಡೆದರು.

ಪ್ರಮುಖರಾದ ಷರ್ೀಸಾಬ್ ನದಾಫ್, ಬಸಪ್ಪ ಹೊಳೆಯಾಚಿ, ಉಮೇಶಗೌಡ, ದೇವೇಂದ್ರಪ್ಪ ಹೊಳೆಯಾಚಿ, ಕುಮಾರ, ಮಂಜಪ್ಪ ಸಿಂದೋಗಿ, ಗೋಣೆಪ್ಪ ಹರ್ನಾಳಗಿ, ಶೇಖಪ್ಪ ಸಿಂದೋಗಿ, ಮಾರುತೆಪ್ಪ, ಮಹಾಂತೇಶ, ಮಂಜಪ್ಪ, ಗಂಗಪ್ಪ ಮೇಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net