

ಹೂವಿನಹಡಗಲಿ: ಪಟ್ಟಣ ಸೇರಿದಂತೆ ತಾಲೂಕಿನಲ್ಲಿ ಶನಿವಾರ ಆರಂಭವಾದ ಮಳೆ ಸೋಮವಾರವೂ ಮುಂದುವರಿದಿದೆ. ತಾಲೂಕಿನಾದ್ಯಂತ ಬೆಳಗ್ಗೆಯಿಂದ ಬಿಸಿಲು ಸಹಿತ ಆರಂಭವಾದ ಮಳೆ ಸಂಜೆವರೆಗೂ ಸುರಿದಿದೆ. ರೈತರು ರಸ್ತೆಯ ಪಕ್ಕದಲ್ಲಿ ಒಣಗಲು ಹಾಕಿದ್ದ ಮೆಕ್ಕೆಜೋಳ, ಜೋಳ, ಸಜ್ಜೆ ಇತರೆ ಧಾನ್ಯಗಳನ್ನು ಮಳೆಯಿಂದ ರಕ್ಷಿಸಿಕೊಳ್ಳಲು ತಾಡಪಾಲ್‌ಗಳನ್ನು ಹಾಕಿದರು. ಮಳೆ ಕಡಿಮೆಯಾಗುತ್ತಿದ್ದಂತೆ ಧಾನ್ಯಗಳನ್ನು ಬೇರೆಡೆಗೆ ಸಾಗಿಸಲು ಪರದಾಡಿದರು. ತಾಲೂಕಿನ ಕೆಲ ಗ್ರಾಮಗಳಿಂದ ತಾಲೂಕು ಕೇಂದ್ರಕ್ಕೆ ಆಗಮಿಸುವ ಶಾಲಾ ಕಾಲೇಜು ಮಕ್ಕಳು ಸೋಮವಾರ ಗೈರಾಗಿದ್ದರು.