ಮೂರನೇ ದಿನಕ್ಕೆ ಕಾಲಿಟ್ಟ ರೈತರ ಧರಣಿ

22-KGL-3
ಕೊಳ್ಳೇಗಾಲದ ಉಪವಿಭಾಗ ಕಚೇರಿ ಮುಂಭಾಗ ರೈತ ರವಿ ಎಂಬುವರು ಕೈಯಲ್ಲಿ ಕ್ರಿಮಿನಾಶಕ ಬಾಟಲ್ ಹಿಡಿದು ಪ್ರತಿಭಟನೆ ನಡೆಸಿದರು.
Published on

ಕೊಳ್ಳೇಗಾಲ: ಕೃಷಿ ಪಂಪ್ ಸೆಟ್‌ಗೆ ನೀಡಲಾಗಿದ್ದ ವಿದ್ಯುತ್ ಸಂಪ ರ್ಕ ಕಡಿತಗೊಳಿಸಿರುವುದನ್ನು ಖಂಡಿಸಿ ಪಟ್ಟಣದ ಉಪವಿಭಾಗ ಕಚೇರಿ ಮುಂಭಾಗ ರೈತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಮಂಗಳವಾರ ಎರಡು ದಿನ ಪೂರೈಸಿದೆ.

ರೈತ ರವಿ ಕೈಯಲ್ಲಿ ಕ್ರಿಮಿನಾಶಕ ಬಾಟಲ್ ಹಿಡಿದು ಪ್ರತಿಭಟಿಸುವ ಮೂಲಕ ನ್ಯಾಯ ಕೊಡಿಸುವಂತೆ ಒತ್ತಾಯಿಸಿದರು.

ನನ್ನ ಜಮೀನಿಗೆ ಎಳೆಸಿರುವ ಬೋರ್‌ವೆಲ್ ಸಾರ್ವಜನಿಕರು ಕುಡಿಯಲು ಬಳಸುವ ಬೋರ್‌ವೆಲ್ ಸಮೀಪವಿರುವುದರಿಂದ ನೀರಿನ ಸಮಸ್ಯೆಯಾಗಿದೆ ಎಂದು ಗ್ರಾಮದ ಕೆಲವರು ದೂರು ನೀಡಿದ್ದು, ಈ ಕಾರಣಕ್ಕೆ ಅಧಿಕಾರಿಗಳು ನನ್ನ ಬೋರ್‌ವೆಲ್‌ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಇದ್ದರಿಂದ ನೀರಿಲ್ಲದೆ ನನ್ನ ಜಮೀನಿನ 10 ಎಕರೆಯಲ್ಲಿ ಬೆಳೆದಿರುವ ಕಬ್ಬು ಒಣಗುತ್ತಿದೆ. ಸೌಜನ್ಯಕ್ಕಾದರೂ ಅಧಿಕಾರಿಗಳು ನಮ್ಮ ಸಮಸ್ಯೆ ಕೇಳುತ್ತಿಲ್ಲ ಎಂದರು.

ಪ್ರತಿಭಟನೆಯಲ್ಲಿ ಕುಂತೂರು ಗ್ರಾಪಂ ಸದಸ್ಯೆ ತೇರಂಬಳ್ಳಿ ರತ್ನಮ್ಮ, ಕುಂತೂರು ಗ್ರಾಮದ ಪ್ರಭುಸ್ವಾಮಿ, ರವಿಕುಮಾರ್, ಸುರೇಶ್, ಶಾಂತ, ಕಿರಣ್, ಗಿರೀಶ್, ಪ್ರಕಾಶ್, ನಾಗೇಂದ್ರ, ನಟೇಶ್, ಗುರುಸ್ವಾಮಿ, ರಘು, ಸುಬ್ಬಣ್ಣ, ಗುರುಲಿಂಗು, ಜಯಶೇಖರ್ ಮೂರ್ತಿ, ತೇರಂಬಳ್ಳಿ ಗ್ರಾಮದ ಶಾರದಮ್ಮ, ಅಶ್ವಿನಿ, ಪಾವರ್ತಮ್ಮ, ಅಭಿಲಾಷ್, ಭಾರತಿ ಮತ್ತಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net