

ನರೇಗಲ್ಲ: ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆಯಲ್ಲಿನ ವ್ಯತ್ಯಯ ಖಂಡಿಸಿ ಅಬ್ಬಿಗೇರಿ, ಯರೇಬೇಲೇರಿ, ಕುರಡಗಿ, ನಾಗರಾಳ, ಕೋಚಲಾಪುರ ಗ್ರಾಮದ ನೂರಾರು ರೈತರು ಕೆಇಬಿ ಗ್ರಿಡ್‌ಗೆ ಸೋಮವಾರ ಮುತ್ತಿಗೆ ಹಾಕಿದರು.
ರೈತ ಸಂಗಪ್ಪ ಕುಂಬಾರ ಮಾತನಾಡಿ, ಮುಂಗಾರು ಬಹುತೇಕ ಕೈಕೊಟ್ಟಿದ್ದು, ಮಳೆಯಾಶ್ರಿತ ಹೆಸರು ಬೆಳೆ ಸಂಪೂರ್ಣ ಹಾಳಾಗಿದೆ. ನೀರಾವರಿ ಜಮೀನಿನಲ್ಲಿ ಬೆಳೆ ಬೆಳೆಯಲು ಲೋಡ್ ಶೆಡ್ಡಿಂಗ್ ಅಡ್ಡಿಯಾಗಿದೆ ಎಂದು ಆರೋಪಿಸಿದರು.
ರೈತ ಗುರಣ್ಣ ಅವರಡ್ಡಿ ಮಾತನಾಡಿ, ಈ ಮೊದಲಿನಂತೆ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ 3 ಫೇಸ್ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿದ ಹೆಸ್ಕಾಂ ಇಇ ರವಿಕಿರಣ ಮಾತನಾಡಿ, ಈ ಸಮಸ್ಯೆಯನ್ನು ಮೇಲಧಿಕಾರಿಗಳ ಗಮನಕ್ಕೆ ತಂದು ಪರಿಹರಿಸಲು ಪ್ರಯತ್ನಿಸಲಾಗುವುದು ಎಂದರು.
ರೈತರಾದ ಸಂಗಪ್ಪ ನೀರಲೊಟ್ಟಿ, ಅಂದಾನಪ್ಪ ಬಂಡಿಹಾಳ, ರವಿ ಜಂತ್ಲಿ, ವೀರಭದ್ರಪ್ಪ ಬಂಡಿಹಾಳ, ಹೇಮಣ್ಣ ಬಸವರಡ್ಡೇರ, ಬಸಣ್ಣ ಹಡಪದ, ಶರಣಪ್ಪ ಹಳ್ಳಿ, ಶಿವಕುಮಾರ ಮಲ್ಲಾಪುರ, ಗಿರೀಶ ನೀರಲೊಟ್ಟಿ, ದೊಡ್ಡಬಸಪ್ಪ ಯತ್ನಟ್ಟಿ, ವಿನೋದ ಹಿರೇಮಠ, ಬಸವರಾಜ ಆಲೂರ, ವೀರೇಶ ಕಂಬಳಿ, ಎಇಇ ಚೇತನ ಹಾದಿಮನಿ, ರೋಣ ಪಿಎಸ್‌ಐ ಎಲ್.ಎಸ್. ಜೂಲಕಟ್ಟಿ ಇದ್ದರು.