

ರಾಯಬಾಗ: ಕಾಲುಬಾಯಿ ರೋಗ ನಿರ್ಮೂಲನೆಗೆ ಪಶು ಇಲಾಖೆಯಿಂದ ಲಸಿಕಾ ಅಭಿಯಾನ ಹಮ್ಮಿಕೊಂಡಿದ್ದು, ರೈತರು ಜಾನುವಾರುಗಳಿಗೆ ಲಸಿಕೆ ಹಾಕಿಸಬೇಕು ಶಾಸಕ ಡಿ.ಎಂ.ಐಹೊಳೆ ಹೇಳಿದರು.
ಪಟ್ಟಣ ಪಶು ಆಸ್ಪತ್ರೆಯಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ 4ನೇ ಸುತ್ತಿನ ಕಾಲುಬಾಯಿ ರೋಗ ಲಸಿಕಾ ಅಭಿಯಾನದಲ್ಲಿ ಅವರು ಮಾತನಾಡಿದರು. ಪಶು ಇಲಾಖೆ ತಾಲೂಕು ಸಹಾಯಕ ನಿರ್ದೇಶಕ ಡಾ.ಸಚಿನ ಸೌಂದಲಗಿ ಮಾತನಾಡಿ, ಕಾಲುಬಾಯಿ ರೋಗ ಎತ್ತು, ಹೋರಿ, ಎಮ್ಮೆಗಳಲ್ಲಿ ಹರಡುತ್ತದೆ. ಸೆ.26ರಿಂದ ಅ.25ರವರೆಗೆ ಎಲ್ಲ ಗ್ರಾಮಗಳಲ್ಲಿ ಉಚಿತವಾಗಿ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತದೆ ಎಂದರು.
ಡಾ.ಎಂ.ಬಿ.ಪಾಟೀಲ, ಪ್ರಮೋದ ತಳವಾರ, ಜೈದೀಪ ದೇಸಾಯಿ, ಸದಾಶಿವ ಘೋರ್ಪಡೆ, ಸದಾಶಿವ ಹಳಿಂಗಲಿ, ಸಿದ್ದು ಆಲಕನೂರ, ಶ್ರೀಕಾಂತ ಹುಕ್ಕೇರಿ, ಸಂತೋಷ ಮನ್ನಿಕೇರಿ, ವಿಶ್ವನಾಥ ಕಾಂಬಳೆ, ದುಂಡಪ್ಪ ಧನಗರ, ಶ್ರೀಕಾಂತ ಗೊಂಡೆ, ವಿಕ್ರಮ ಮೇಟಿ, ಇಸ್ಮಾಯಿಲ್ ಅತ್ತಾರ್, ಅಕ್ಷಯ ಕರಿಹೊಳಿ, ಮಲ್ಲಪ್ಪ ಶಾರಬಿದ್ರೆ ಇತರರಿದ್ದರು.