ರೈತರು ನೀರನ್ನು ಮಿತವಾಗಿ ಬಳಸಬೇಕು

5Athanigrameen3 SPONCER
Published on

ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಪ್ರತಿ ಹಳ್ಳಿಗಳ ರೈತರ ಅನುಕೂಲಕ್ಕಾಗಿ ಅಂತರ್ಜಲಮಟ್ಟ ಹೆಚ್ಚಿಸಲು ಸುಟ್ಟಟ್ಟಿ ಹಾಗೂ ಬಾಡಗಿ ಗ್ರಾಮದ ಹಿರೇ ಹಳ್ಳಕ್ಕೆ ಚೆಕ್‌ಡ್ಯಾಂಗಳ ನಿರ್ಮಾಣ ಕೈಗೊಳ್ಳಲಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು,

ಅಥಣಿ ತಾಲೂಕಿನ ಸುಟ್ಟಟ್ಟಿ ಹಾಗೂ ಬಾಡಗಿ ಗ್ರಾಮದ ಹಿರೇ ಹಳ್ಳಗಳಿಗೆ ಸೋಮವಾರ ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಉಪವಿಭಾಗ ಅಥಣಿ ವತಿಯಿಂದ ಅಟಲ್ ಭೂ ಜಲ ಯೋಜನೆಯಡಿ 2 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುವ ಚೆಕ್ ಡ್ಯಾಂ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.

ಮಳೆನೀರು ವ್ಯರ್ಥ ಹರಿಯದಂತೆ ಚೆಕ್ ಡ್ಯಾಂ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದ ಈ ಭಾಗದ ನೂರಾರು ಎಕರೆ ಭೂಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರೆಯಲಿದೆ. ರೈತರು ನೀರನ್ನು ಮಿತವಾಗಿ ಬಳಸಿ ಬೆಳೆ ತೆಗೆದು ಆರ್ಥಿಕವಾಗಿ ಸದೃಢರಾಗಬೇಕು ಎಂದು ಸಲಹೆ ನೀಡಿದರು.

ಕೆಪಿಸಿಸಿ ಸದಸ್ಯ ಶಾಮರಾವ ಪೂಜಾರಿ ಮಾತನಾಡಿ, ಶಾಸಕ ಲಕ್ಷ್ಮಣ ಸವದಿ ಕೈಗೊಂಡ ಕೆರೆ ತುಂಬುವ ಯೋಜನೆ, ಅಮ್ಮಾಜೇಶ್ವರಿ ಕೊಟ್ಟಲಗಿ ಏತನೀರಾವರಿ ಸೇರಿ ಹಳ್ಳಗಳಿಗೆ ಬಾಂದಾರ್ ಮತ್ತು ಚೆಕ್‌ಡ್ಯಾಂ ನಿರ್ಮಾಣ ಕಾರ್ಯಗಳು ರೈತರ ಆರ್ಥಿಕ ಚಟುವಟಿಕೆಗಳ ಬಲ ಹೆಚ್ಚಿಸಿವೆ ಎಂದರು.

ಮುಖಂಡರಾದ ಮಲ್ಲು ಡಂಗಿ, ತಮ್ಮಣ್ಣ ಮಗರ, ಮನೋಹರ ಜಂಬಗಿ, ಸುಭಾಷ ಸೋನಕರ, ಅಮಿತ ದೇಸಾಯಿ, ಶಿವಾನಂದ ನೇಮಗೌಡ, ಸಿದ್ದು ಹಳ್ಳಿ, ಮಹಾವೀರ ವೀರಗೌಡ, ಸಾಬು ಮಾಳಿ, ಪಿಕೆಪಿಎಸ್ ಅಧ್ಯಕ್ಷ ಅನಿಲ ಚವ್ಹಾಣ, ಮಹಾದೇವ ಮಗರ, ಭೀಮಶಿ ಡಂಗಿ, ಈರಪ್ಪ ನೇಮಗೌಡ, ಯಲ್ಲಪ್ಪ ಪಡಸಲಗಿ, ರಾಜು ಬಿರಾದಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net