ಪರ್ಯಾಯ ಬೆಳೆ ಬೆಳೆಯಲು ರೈತರು ಯೋಚಿಸಲಿ

YLP PATASHALE
Published on

ಯಲ್ಲಾಪುರ: ಅಡಕೆಗೆ ಪರ್ಯಾಯ ಬೆಳೆ ಬೆಳೆಯುವ ಬಗ್ಗೆ ಕೃಷಿಕರು ಯೋಚಿಸಬೇಕು. ಹವಾಮಾನ ವೈಪರೀತ್ಯಗಳಿಂದ ಬೆಳೆಯ ಇಳುವರಿಯಲ್ಲಿ ಏರುಪೇರಾಗುವುದು ಸಹಜ ಎಂದು ಸಹಾಯಕ ತೋಟಗಾರಿಕೆ ನಿರ್ದೇಶಕ ಸತೀಶ ಹೆಗಡೆ ಹೇಳಿದರು.

ತಾಲೂಕಿನ ಬಾಗಿನಕಟ್ಟಾದ ಕೃಷಿಕ ಸುಬ್ರಹ್ಮಣ್ಯ ಗಾಂವ್ಕರ ಅವರ ಮನೆಯಂಗಳದಲ್ಲಿ ಹಮ್ಮಿಕೊಂಡಿದ್ದ ಸಮಗ್ರ ತೋಟಗಾರಿಕೆ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜ ನಾಯ್ಕ ಮಾತನಾಡಿ, ಫಲವತ್ತತೆ ಪರಿಶೀಲಿಸಿ ಪೋಷಕಾಂಶ ಒದಗಿಸಬೇಕು. ಕಾಲಕಾಲಕ್ಕೆ ಮಣ್ಣಿನ ಪರೀಕ್ಷೆ ಮಾಡಿಸಿಕೊಂಡು ಸುಣ್ಣ ಸೇರಿದಂತೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸಬೇಕು ಎಂದರು.

ಮಾವಿನಮನೆ ಗ್ರಾಪಂ ಅಧ್ಯಕ್ಷ ಸುಬ್ಬಣ್ಣ ಕುಂಟೇಗಾಳಿ, ವಜ್ರಳ್ಳಿಯ ಗ್ರಾಪಂ ಅಧ್ಯಕ್ಷ ಭಗೀರಥ ನಾಯ್ಕ, ಉಪಾಧ್ಯಕ್ಷೆ ಗಂಗಾ ಕೋಮಾರ, ತೋಟಗಾರಿಕೆ ಸಹಾಯಕ ಅಧಿಕಾರಿ ವೇದಾವತಿ ನಾಯ್ಕ, ಆತ್ಮಾ ಯೋಜನೆಯ ಎಂ.ಜಿ. ಭಟ್ಟ, ಲಲಿತಾ ಹೆಗಡೆ ಉಂಚಳ್ಳಿ, ಸದಾನಂದ ಭಟ್ಟ ಇತರರು ಉಪಸ್ಥಿತರಿದ್ದರು.

ಹಿರಿಯ ವೈದಿಕ ರಾಮಕೃಷ್ಣ ಭಟ್ಟ ನೆಲೆಮನೆ ಅಧ್ಯಕ್ಷತೆ ವಹಿಸಿದ್ದರು. ಮಾಧ್ಯಮಶ್ರೀ ಪ್ರಶಸ್ತಿ ಪುರಸ್ಕೃತ ಪತ್ರಕರ್ತೆ ವಿನುತಾ ಹೆಗಡೆ ಕಾನಗೋಡ ಅವರನ್ನು ಗೌರವಿಸಲಾಯಿತು. ಕೃಷಿಕ ಶ್ರೀಕೃಷ್ಣ ಭಟ್ಟ ಅವರನ್ನು ಸನ್ಮಾನಿಸಲಾಯಿತು. ಸುಬ್ರಹ್ಮಣ್ಯ ಗಾಂವ್ಕರ, ಶಿವಪ್ರಸಾದ ಗಾಂವ್ಕರ, ಗಜಾನನ ಭಟ್ಟ ಕಳಚೆ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net