ರೈತರು ಸಕಾಲಕ್ಕೆ ಸಾಲ ಮರುಪಾವತಿಸಲಿ

20 BUDIKOTE 1
Published on

ಬೂದಿಕೋಟೆ: ಸೊಸೈಟಿಯಲ್ಲಿ ಸಾಲ ಪಡೆದುಕೊಂಡ ರೈತರು ಸಕಾಲಕ್ಕೆ ಮರುಪಾವತಿಸಿದಾಗ ಮಾತ್ರ ಸಂಘ ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಗುಲ್ಲಹಳ್ಳಿ ವ್ಯವಸಾಯ ಸೇವಾ ಸಹಕಾರ ಸಂಘದ ನಿರ್ದೇಶಕ ಆರ್​.ನಾರಾಯಣಪ್ಪ ಹೇಳಿದರು.

ಹೋಬಳಿಯ ಗುಲ್ಲಹಳ್ಳಿ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಕಚೇರಿ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2024&-25ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಸರಿಯಾದ ಸಮಯಕ್ಕೆ ಸಾಲ ಪಾವತಿಸಿದರೆ ಅನೇಕ ರೈತರಿಗೆ ಸಹಾಯವಾಗುತ್ತದೆ. ನೀವು ಪಾವತಿಸಿದಂತಹ ಹಣ ಮತ್ತೊಬ್ಬ ರೈತರಿಗೆ ಸಾಲದ ರೂಪದಲ್ಲಿ ನೀಡಬಹುದು ಎಂದರು.

ಎಲ್ಲ ಷೇರುದಾರರಿಗೂ ಸಂಘದ ವಹಿವಾಟು ತಿಳಿದುಕೊಳ್ಳಲು ಇದೊಂದು ಸುವರ್ಣ ಅವಕಾಶವಾಗಿದ್ದು, ಸಂಘದಲ್ಲಿ ಯಾವುದೇ ಸಮಸ್ಯೆಗಳಿದ್ದಲ್ಲಿ ಹಾಗೂ ಯಾವುದಾದರೂ ಬದಲಾವಣೆ ಮಾಡಿಕೊಳ್ಳಬೇಕೆಂದರೆ, ಈ ಸಭೆಯಲ್ಲಿ ತಿಳಿಸಬಹುದು ಅದರಿಂದ ಎಲ್ಲರಿಗೂ ಅನುಕೂಲವಾಗುತ್ತದೆ ಎಂದರೆ ಅದನ್ನು ಜಾರಿ ಮಾಡುತ್ತೇವೆ ಎಂದರು.

ನಿರ್ದೇಶಕರಾದ ಎಸ್​.ನಾರಾಯಣಸ್ವಾಮಿ, ಬಿ.ಚಂದ್ರಪ್ಪ, ತಿಮ್ಮಪ್ಪ, ನಾರಾಯಣಪ್ಪ, ರಾಮಕೃಷ್ಣಪ್ಪ, ಕೊಂಡಪ್ಪ ನಾಯಕ, ಆಂಜಪ್ಪ, ನಾರಾಯಣಮ್ಮ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀನಿವಾಸ, ಸಿಬ್ಬಂದಿ ಅರುಣ್​ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net