ರೈತರು ಗುಣಮಟ್ಟದ ಜೋಳ ನೀಡಲಿ

ಸಿಂಧನೂರಿನ ಟಿಎಪಿಸಿಎಂಎಸ್ ಆವರಣದಲ್ಲಿ ಆರಂಭವಾದ ಜೋಳ ಖರೀದಿ ಕೇಂದ್ರಕ್ಕೆ ತಹಸೀಲ್ದಾರ್ ಅರುಣ್ ದೇಸಾಯಿ ಅವರು ರೈತ ಲಿಂಗಪ್ಪ ಅವರಿಗೆ ಖರೀದಿ ಪ್ರಮಾಣ ಪತ್ರ ನೀಡುವ ಮೂಲಕ ಚಾಲನೆ ನೀಡಿದರು. ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಪ್ಪ ರಡ್ಡೇರ್, ಎಪಿಎಂಸಿ ಕಾರ್ಯದರ್ಶಿ ರವಿಚಂದ್ರ ಇತರರಿದ್ದರು.
ಸಿಂಧನೂರಿನ ಟಿಎಪಿಸಿಎಂಎಸ್ ಆವರಣದಲ್ಲಿ ಆರಂಭವಾದ ಜೋಳ ಖರೀದಿ ಕೇಂದ್ರಕ್ಕೆ ತಹಸೀಲ್ದಾರ್ ಅರುಣ್ ದೇಸಾಯಿ ಅವರು ರೈತ ಲಿಂಗಪ್ಪ ಅವರಿಗೆ ಖರೀದಿ ಪ್ರಮಾಣ ಪತ್ರ ನೀಡುವ ಮೂಲಕ ಚಾಲನೆ ನೀಡಿದರು. ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಪ್ಪ ರಡ್ಡೇರ್, ಎಪಿಎಂಸಿ ಕಾರ್ಯದರ್ಶಿ ರವಿಚಂದ್ರ ಇತರರಿದ್ದರು.
Published on

ಸಿಂಧನೂರು: ಖರೀದಿ ಕೇಂದ್ರಕ್ಕೆ ರೈತರು ಗುಣಮಟ್ಟದ ಜೋಳ ನೀಡುವ ಮೂಲಕ ಬೆಂಬಲ ಬೆಲೆ ಪಡೆಯಬೇಕು ಎಂದು ತಹಸೀಲ್ದಾರ್ ಅರುಣ್ ದೇಸಾಯಿ ಹೇಳಿದರು.

ನಗರದ ಟಿಎಪಿಸಿಎಂಎಸ್ ಆವರಣದಲ್ಲಿ ಕೃಷಿ ಮಾರಾಟ ಇಲಾಖೆ, ರಾಜ್ಯ ಕೃಷಿ ಮಾರಾಟ ಮಂಡಳಿ, ಆಹಾರ ಇಲಾಖೆ ಮತ್ತು ಜಿಲ್ಲಾಡಳಿತದ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜೋಳ ಖರೀದಿ ಕೇಂದ್ರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಹೈಬ್ರೀಡ್ ತಳಿಯ ಜೋಳ ಕ್ವಿಂಟಾಲ್‌ಗೆ 3371 ರೂ. ಹಾಗೂ ಮಾಲ್ದಂಡಿ ತಳಿ ಕ್ವಿಂಟಾಲ್‌ಗೆ 3471ರೂ. ನಿಗದಿಪಡಿಸಿದ್ದು, ಖರೀದಿ ಪ್ರಕ್ರಿಯೆ ಪಾರದರ್ಶಕ ಆಗಿರಬೇಕು ಎನ್ನುವ ದೃಷ್ಟಿಯಿಂದ ವಿಳಂಬವಾಗಿದೆ. ರೈತರು ಗುಣಮಟ್ಟದ ಜೋಳ ನೀಡಿ ಸದುಪಯೋಗ ಪಡೆದುಕೊಳ್ಳಬೇಕು. ತಾಲೂಕಿನಲ್ಲಿ 14 ಖರೀದಿ ಕೇಂದ್ರಗಳಿದ್ದು, ಜವಳಗೇರಾ, ಅಲಬನೂರು ಹಾಗೂ ಸಿಂಧನೂರಿನಲ್ಲಿ ಎರಡು ಕಡೆ ಜೋಳ ಖರೀದಿ ಪ್ರಕ್ರಿಯೆ ನಡೆಯಲಿದೆ. ತಾಲೂಕಿನಿಂದ 15 ಲಕ್ಷ ಕ್ವಿಂ. ಜೋಳ ಖರೀದಿ ಕೇಂದ್ರಕ್ಕೆ ಬರಲಿದೆ ಎಂದು ತಿಳಿಸಿದರು.

ಜಿಪಂ ಮಾಜಿ ಸದಸ್ಯ ಬಾಬುಗೌಡ ಬಾದರ್ಲಿ ಮಾತನಾಡಿ, ಹಿಂದಿನ ಅವಧಿಯಂತೆ ಭ್ರಷ್ಟಾಚಾರಕ್ಕೆ ಅವಕಾಶ ನೀಡಬಾರದು. ರೈತರಿಗೆ ಇದರ ಲಾಭ ಸಿಗಬೇಕು. ಲೋಪದೋಷಗಳಾದರೆ ಅಧಿಕಾರಿಗಳೇ ಹೊಣೆ ಹೊರಬೇಕಾಗುತ್ತದೆ ಎಂದರು.

ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಮಾತನಾಡಿ, ಸರ್ಕಾರ ನಿಗದಿಪಡಿಸಿದ ಬೆಲೆಯಂತೆ ವ್ಯವಹಾರ ನಡೆಸಬೇಕು. ರೈತರಿಂದ ಹೆಚ್ಚುವರಿ ಹಣ ಪಡೆಯಬಾರದು. ರೈತರು ಒಂದು ಚೀಲಕ್ಕೆ 50ಕೆಜಿ, 600 ಗ್ರಾಂ ಮಾತ್ರ ನೀಡಬೇಕು. ತಪ್ಪು ಕಂಡು ಬಂದರೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದರು.

ಎಪಿಎಂಸಿ ಕಾರ್ಯದರ್ಶಿ ರವಿಚಂದ್ರ, ಟಿಎಪಿಸಿಎಂಎಸ್ ಅಧ್ಯಕ್ಷ ಶರಣಪ್ಪ ರಡ್ಡೇರ್, ನಿರ್ದೇಶಕರಾದ ಶರಣೇಗೌಡ ಗೊರೇಬಾಳ, ವೆಂಕಟರೆಡ್ಡಿ ಹುಡಾ, ವ್ಯವಸ್ಥಾಪಕ ಹನುಮರಡ್ಡಿ ನಿಡಿಗೋಳ, ಆಹಾರ ಇಲಾಖೆ ಜಿಲ್ಲಾ ವ್ಯವಸ್ಥಾಪಕ ಡಿ.ಎಂ.ಆಶಿಕ್ ಅಲಿ, ಆಹಾರ ಶಿರಸ್ತೇದಾರ್ ಆನಂದ ಮೋಹನ್, ಗುಣಮಟ್ಟ ಪರಿಶೀಲಕ ವಿನಯಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net