ರೈತರು ಕೃಷಿಮೇಳಗಳ ಸದ್ಬಳಕೆ ಮಾಡಲಿ

Farmers should make good use of agricultural fairs
ಇಂಡಿ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಲಿಂಬೆ ಬೆಳೆಗಾರರಿಗೆ ಕೃಷಿ ಮೇಳ ಪ್ರವಾಸ ವಾಹನಗಳಿಗೆ ಎಸಿ ಅಬೀದ್​ ಗದ್ಯಾಳ ಚಾಲನೆ ನೀಡಿದರು. ಎಚ್​.ಎಸ್​.ಪಾಟೀಲ, ಭೀಮಣ್ಣ ಉಪ್ಪಾರ, ಬಸವರಾಜ ಹಂಜಗಿ, ಶರಣು ದಳವಾಯಿ ಇತರರಿದ್ದರು.
Published on

ಇಂಡಿ: ಕೃಷಿ ಮೇಳಗಳು ರೈತರಿಗೆ ಅತ್ಯಂತ ಉಪಯೋಗಕಾರಿಯಾಗಿದ್ದು, ಅವುಗಳ ಸದುಪಯೋಗ ಮಾಡಿಕೊಳ್ಳುವುದು ಅವಶ್ಯ ಎಂದು ಕಂದಾಯ ಉಪವಿಭಾಗಾಧಿಕಾರಿ ಅಬೀದ್​ ಗದ್ಯಾಳ ಹೇಳಿದರು.

ತಾಲೂಕು ಆಡಳಿತ ಸೌಧದ ಆವರಣದಲ್ಲಿ ತೋಟಗಾರಿಕೆ, ಎಸ್​ಡಬ್ಲುಎ, ಆರ್​ಡಿಎಸ್​ ಸಂಸ್ಥೆ ಸಹಯೋಗದೊಂದಿಗೆ ಪರಂಪರಾಗತ ಕೃಷಿ ವಿಕಾಸ ಯೋಜನೆ ಅಡಿ ಲಿಂಬೆ ಬೆಳೆಗಾರರಿಗೆ ಕೃಷಿ ಮೇಳ ಪ್ರವಾಸ ವಾಹನಗಳಿಗೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.

ಕೃಷಿಕರು ಸುಸ್ಥಿರ ಮತ್ತು ಸಾವಯವ ಬೇಸಾಯದ ಬಗ್ಗೆ ಮಾಹಿತಿ ಪಡೆಯಬೇಕು. ಕೃಷಿ ಉತ್ಪನ್ನಗಳಿಗೆ ಉತ್ತಮ ಮಾರುಕಟ್ಟೆ, ಕೃಷಿ ವೈಜ್ಞಾನಿಕ ಪದ್ಧತಿಗಳ ಬಗ್ಗೆ ಅರ್ಥಮಾಡಿಕೊಳ್ಳಲು ಅತ್ಯಂತ ಸೂಕ್ತ ವೇದಿಕೆ ಕೃಷಿಮೇಳ ಹಾಗೂ ಕೃಷಿ ಜಾತ್ರೆಯಾಗಿದೆ. ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಕೊಂಡಾಗ ಮಾತ್ರ ರೈತರು ಒಳ್ಳೆಯ ಸಲು ಪಡೆಯಲು ಸಾಧ್ಯ ಎಂದರು.

ತೋಟಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಎಚ್​.ಎಸ್​.ಪಾಟೀಲ ಮಾತನಾಡಿ, ಕೃಷಿ ಮೇಳದಲ್ಲಿ ಪಾಲ್ಗೊಂಡರೆ ಹೊಸ ಆವಿಷ್ಕಾರ ಮಾಡಲು ಸೂಕ್ತ ವೇದಿಕೆಯಾಗುತ್ತದೆ. ಹೈನುಗಾರಿಕೆ, ರೇಷ್ಮೆ ಕೃಷಿ, ಬೆಳೆಯ ಮೌಲ್ಯವರ್ಧನೆ, ಸಾವಯವ ಕೃಷಿ, ಸುಸ್ಥಿರ ಕೃಷಿ ಹಾಗೂ ಔಷಧ ಮತ್ತು ಸುಗಂಧ ದ್ರವ್ಯ ಸಸ್ಯಗಳ ಬಗ್ಗೆ ಅನೇಕ ರೀತಿಯ ಮಾಹಿತಿ ದೊರೆಯುತ್ತದೆ ಎಂದರು.

ಭೀಮಣ್ಣ ಉಪ್ಪಾರ, ಬಸವರಾಜ ಹಂಜಗಿ, ಶರಣು ದಳವಾಯಿ, ಸೋಮನಿಂಗ ಉಪ್ಪಾರ, ಯಶವಂತರಾಯ ಉಪ್ಪಾರ, ಅಭಿಮನ್ಯು ಹಳ್ಳಿ, ಶ್ರೀಶೈಲ ಗಿಣ್ಣಿ, ಪರಸಪ್ಪ ಗಿಣ್ಣಿ, ಗುರಪ್ಪ ಅಗಸರ ಸೇರಿ ತಡವಲಗಾ ಹಾಗೂ ರೂಗಿ ಗ್ರಾಮದ ರೈತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net