

ಬೆಂಗಳೂರು:ಕೃಷಿಕರ ಜೀವನೋಪಾಯ ಭದ್ರತೆ ಖಾತ್ರಿಗೆ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕೆಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
"ವಿಕಸಿತ ಭಾರತಕ್ಕಾಗಿ ತೋಟಗಾರಿಕೆ:ಪೋಷಣೆ, ಸಬಲೀಕರಣ ಮತ್ತು ಜೀವನೋಪಾಯ' ಪರಿಕಲ್ಪನೆ ಅಡಿ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ (ಐಸಿಎಆರ್-ಐಐಎಚ್ಆರ್) ಹೆಸರುಟ್ಟದಲ್ಲಿರುವ ಸಂಸ್ಥೆ ಆವರಣದಲ್ಲಿ ಆಯೋಜಿಸಿದ್ದ 3 ದಿನಗಳ "ರಾಷ್ಟ್ರೀಯ ತೋಟಗಾರಿಕೆ ಮೇಳ-2025'ಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು.
ಮಿಶ್ರ ಬೆಳೆ ಬೆಳೆಯುವುದಕ್ಕೆ ರೈತರು ಆದ್ಯತೆ ನೀಡಬೇಕು.ಕೀಟನಾಶಕ ಬಳಕೆ ಕಡಿಮೆಯಾಗಬೇಕು. ಆಹಾರ ಸಂಸ್ಕರಣೆ ಮತ್ತು ಮಾರುಕಟ್ಟೆ ವೃದ್ಧಿಗೆ ನಮ್ಮ ಮೇಲೆ ಜವಾಬ್ದಾರಿ ಇದೆ. ಸಂಶೋಧನೆಗಳ ಉಪಯೋಗ ರೈತರಿಗೆ ತಲುಪಬೇಕು. ಖಾದ್ಯ ತೈಲಗಳ ಉತ್ಪನ್ನಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ರೈತ ಮೂಲಕ ದೇಶ ಅಭಿವೃದ್ಧಿಯಾಗುತ್ತಿದೆ. ದೇಶದ ಶೇ.60 ಮಂದಿ ಕೃಷಿ ಮತ್ತು ತೋಟಗಾರಿಕೆ ಕ್ಷೇತ್ರವನ್ನು ಅವಲಂಬಿಸಿದ್ದಾರೆ. ಹಾಗಾಗಿ, ರೈತರ ಅಭ್ಯುದಯಕ್ಕೆ ಕೇಂದ್ರ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತಂದಿದೆ ಎಂದರು.ಕೃಷಿ ಕ್ಷೇತ್ರದಲ್ಲಿ ಸಾಧನೆಗೈದ ರೈತರನ್ನು ಸನ್ಮಾನಿಸಲಾಯಿತು. ಐಸಿಎಆರ್ ನಿರ್ದೇಶಕ ಡಾ.ತುಷಾರ್ ಕಾಂತಿ ಬೇಹೇರಾ,ಬೆಂಗಳೂರು ಕೃಷಿ ವಿವಿ ಕುಲಪತಿ ಡಾ. ಎಸ್.ವಿ. ಸುರೇಶ್,ಸಂಶೋಧನಾ ಸಲಹಾ ಸಮಿತಿಯ ಅಧ್ಯಕ್ಷ ಡಾ.ಎಂ.ಕೆ.ನಾಯಕ್,ದೆಹಲಿಯ ತೋಟಗಾರಿಕೆ ವಿಭಾಗದ ಸಹಾಯಕ ಮಹಾನಿರ್ದೇಶಕ ಡಾ.ವಿ.ಬಿ.ಪಟೇಲ್ ಮತ್ತಿತರರಿದ್ದರು.
ರೆಡಿ ಟು ಫುಡ್ಗೆ ಹೆಚ್ಚಿದ ಬೇಡಿಕೆ: ಹಸಿರು ಕ್ರಾಂತಿ ಮೂಲಕ ಭಾರತವು ಆಹಾರ ಭದ್ರತೆ ಸಾಧಿಸಿದೆ. 2047ಕ್ಕೆ ನಮ್ಮ ದೇಶ ವಿಕಸಿತ ಭಾರತವಾಗಲಿದೆ. ಉತಷ್ಟ ತಳಿಗಳು, ಸಾಂದ್ರತಾ ಬೆಳೆ ಪದ್ಧತಿ, ಸ್ಥಿರತೆಯಿಂದ ಯುಕ್ತವಾದ ನವೀನ ತಂತ್ರಾನಗಳ ಮೂಲಕ ಕೃಷಿ ಮತ್ತು ತೋಟಗಾರಿಕೆ ೇತ್ರವನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದರು. ಕೀಟನಾಶಕಗಳು, ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಉಂಟಾಗುವ ಅಪಾಯ ಕುರಿತು ಕೃಷಿ ವಿಾನಿಗಳು ಪರಿಣಾಮಕಾರಿಯಾಗಿ ಜಾಗೃತ ಮೂಡಿಸಬೇಕಿದೆ. ಸಮಾಜದ ಆರ್ಥಿಕ ಸ್ಥಿತಿಯ ಅವಿರತ ಬದಲಾವಣೆಗಳ ಕಾರಣದಿಂದ ತಣದ ಅಡುಗೆ ಮತ್ತು ಸೇವನೆಗೆ ತಯಾರಾದ ಉತ್ಪನ್ನಗಳ ಅಭಿವೃದ್ಧಿಗೆ ಹೆಚ್ಚಿನ ಅವಕಾಶವಿದೆ. ಈ ನಿಟ್ಟಿನಲ್ಲಿ ತೋಟಗಾರಿಕೆ ಉತ್ಪನ್ನಗಳ ಮೌಲ್ಯವರ್ಧಿತ ಉತ್ಪಾದನೆಯನ್ನು ದೊಡ್ಡ ಪ್ರಮಾಣದಲ್ಲಿ ಕೈಗೊಳ್ಳಲು ಎಂಎಸ್ಎಂಇ ವಲಯ ಸಹಾಯ ಮಾಡಬಹುದು ಎಂದು ಕೇಂದ್ರ ಸಚಿವೆ ತಿಳಿಸಿದರು.
ಹಲಸಿನಕಾಯಿ ಕಬಾಬ್: "ಅರ್ಕಾ ಟೆಂಡರ್ ಜಾಕ್' ಹೆಸರಿನ ಹಲಸಿನಕಾಯಿಯ ಕಬಾಬ್ ಮೇಳದಲ್ಲಿ ಆಕರ್ಷಣೆಯಾಗಿದೆ.ಅಧಿಕ ನಾರಿನ ಅಂಶವುಳ್ಳ ಹಲಸಿನಕಾಯಿ,ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರು ಸೇವಿಸಬಹುದು.ಚಿಕನ್ ಕಬಾಬ್ನಂತೆ ರುಚಿ ನೀಡುವ ವಿಶೇಷ ತಿನಿಸು ಇದಾಗಿದೆ.ಹಲಸಿನ ಹಣ್ಣು ಮತ್ತು ಕಾಯಿಯಲ್ಲಿ ಹಲವು ಔಷಧೀಯ ಗುಣಗಳಿದ್ದು, ಬಹುತೇಕರು ಇಷ್ಟಪಡುವ ಲ ಇದಾಗಿದೆ. ಮೊದಲ ಬಾರಿಗೆ ಐಐಎಚ್ಆರ್ ಹಲಸಿನಕಾಯಿ ಕಬಾಬ್, ಪಿಜ್ಜಾ, ರ್ಬಗರ್ ಮಾಡುವ ನೂತನ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ.
ಮೇಳದ ವಿಶೇಷತೆ: 250ಕ್ಕೂ ಅಧಿಕ ಮಳಿಗೆಗಳನ್ನು ಮೇಳದಲ್ಲಿ ತೆರೆಯಲಾಗಿದೆ. "ಅರ್ಕಾ ಧೃತಿ ಮತ್ತು ಅರ್ಕಾ ನಿಹಿರಾ' ಹೆಸರಿನ ಎಲೆ ಸುರುಳಿ ನಂಜಾಣು ರೋಗ ನಿರೋಧಕ ಮೆಣಸಿನಕಾಯಿ ಮಿಶ್ರತಳಿಗಳು, ಕೊಳೆ ರೋಗ ನಿರೋಧಕ "ಅರ್ಕಾ ಶ್ರೇಯಸ್' ಹೆಸರಿನ ಸೋರೆಕಾಯಿ,ಅವಕಾಡೊ (ಬೆಣ್ಣೆ ಹಣ್ಣು), ಆಕರ್ಷಕ ಗುಲಾಬಿ ಬಣ್ಣದ ಸಿಪ್ಪೆ ಹೊಂದಿರುವ ಬೆಲ್ ಆಕಾರದ ಜಾವಾ/ರೋಸ್ ಆಪಲ್ ಮತ್ತಿತರ ಹೊಸ ತಳಿಗಳು ಹಾಗೂ ಎಲ್ಮ್ ಅಣಬೆಯಲ್ಲಿ ವಿಟಮಿನ್ ಡಿ ಪುಷ್ಟೀಕರಣ ತಂತ್ರಜ್ಞಾನ ಸೇರಿದಂತೆ ಹೊಸ ತಂತ್ರಜ್ಞಾನಗಳು ಮೇಳದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ. ಕಲ್ಲಂಗಡಿ,ಸೋರೆಕಾಯಿ, ಮೆಣಸಿನಕಾಯಿ, ಬೆಣ್ಣೆಹಣ್ಣು, ರೋಸ್ ಆಪಲ್, ಅಣಬೆ ಪುಷ್ಟೀಕರಣ ಸೇರಿ ನಾನಾ ಹೊಸ ತಳಿಗಳು ಮತ್ತು ತಂತ್ರಜ್ಞಾನಗಳ ಪ್ರದರ್ಶನ ಇದೆ. ಬಿತ್ತನೆ ಬೀಜ, ಹೂವು ಮತ್ತು ತರಕಾರಿ ಹಣ್ಣಿನ ತಳಿಗಳ ಸಸಿಗಳು, ಹಸಿರು ಮನೆ ಪರಿಕರಗಳು,ಸಂಶೋಧನೆ ಮತ್ತು ಅಭಿವೃದ್ಧಿ,ಸಸ್ಯ ಪೋಷಕಾಂಶಗಳು, ಕೀಟನಾಶಕಗಳು, ನೀರಾವರಿ ವ್ಯವಸ್ಥೆ, ಆಹಾರ ಸಂಸ್ಕರಣೆ ಮತ್ತು ಪ್ಯಾಕೇಜಿಂಗ್ ಪ್ರದರ್ಶನ ಇದೆ. ನಗರ ತೋಟಗಾರಿಕೆ, ಮಣ್ಣುರಹಿತ ಕೃಷಿ, ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆ, ಪ್ಯಾಕೇಜ್, ಸಂಗ್ರಹ ತಂತ್ರಜ್ಞಾನಗಳ ಕುರಿತು ತಜ್ಞರು ಮಾಹಿತಿ ನೀಡಲಿದ್ದಾರೆ.
ಸಂಶೋಧನೆ, ಬೋಧನೆ, ವಿಸ್ತರಣೆ ಮತ್ತು ಉದ್ಯಮಶೀಲತೆ ಮೂಲಕ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆ ಮೊದಲ ಸ್ಥಾನದಲ್ಲಿರುವುದು ಗಮನಾರ್ಹ. ಅಣಬೆ ಸೇರಿ ಇತರೆ ಬೆಳೆಗಳ ಕುರಿತು ಮಾಹಿತಿ ಪಡೆದುಕೊಂಡಿದ್ದೇನೆ.ಮೇಳವನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕು.
| ಸುರೇಶ್ ಬಾಬು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ.
ತೋಟಗಾರಿಕೆ ವೃದ್ಧಿ ದರವು ಕೃಷಿ ವೃದ್ಧಿ ದರಕ್ಕಿಂತ ಶೇ.3 ಹೆಚ್ಚು ಇದೆ.ತೋಟಗಾರಿಕೆಯಲ್ಲಿ ರೈತರು ತಮ್ಮ ಆದಾಯವನ್ನು ಈಗಾಗಲೇ ದ್ವಿಗುಣಗೊಳಿಸಿದ್ದಾರೆ. ಪೋಷಕಾಂಶ ಒಳಗೊಂಡ ಹೊಸ ತೋಟಗಾರಿಕೆ ತಳಿಗಳ ಅಭಿವೃದ್ಧಿ ಮತ್ತು ತೋಟಗಾರಿಕೆ ಉತ್ಪನ್ನಗಳ ಪರಿಷ್ಕರಣೆ ಅಗತ್ಯವಿದೆ.
| ಪ್ರೊ.ರಮೇಶ್ ಚಂದ್, ನೀತಿ ಆಯೋಗದ ಸದಸ್ಯ.