ರೈತರೇ ವೆಚ್ಚರಹಿತ ಕೃಷಿಗೆ ಆದ್ಯತೆ ನೀಡಿ

30CHR01
Published on

ಚೌಳಹಿರಿಯೂರು: ರೈತರು ಕೃಷಿಗಾಗಿ ಇಂದು ಸಾಕಷ್ಟು ಹಣ ವೆಚ್ಚ ಮಾಡುತ್ತಿದ್ದಾರೆ ಇದರ ಬದಲಿಗೆ ವೆಚ್ಚ ರಹಿತ ಕೃಷಿ ಕ್ರಮಗಳನ್ನು ರೂಢಿಸಿ ಕೊಳ್ಳುವುದರಿಂದ ಹೆಚ್ಚು ಲಾಭಗಳಿಸಬಹುದು ಎಂದು ಕೂಡ್ಲಿಗಿ ತಾಲೂಕು ಹುಲಿಕೆರೆಯ ಮರ ಆಧಾರಿತ ಕೃಷಿ ಸಾಧಕ ಎಚ್.ವಿಶ್ವೇಶ್ವರ ಸಜ್ಜನ್ ಹೇಳಿದರು.

ಶ್ರೀ ಮಹೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದ ಸರ್ವ ಶರಣರ ಸಮ್ಮೆಳನದಲ್ಲಿ ಉಪನ್ಯಾಸ ನೀಡಿ ಇತ್ತಿಚಿನ ದಿನಗಳಲ್ಲಿ ರಾಸಾಯನಿಕ ಗೊಬ್ಬರ, ಕೀಟ ನಾಶಕ, ಕಳೆ ನಾಶಕ ಬಳಕೆಯಿಂದ ಭೂಮಿ ಬರಡಾಗುತ್ತಿದೆ. ಇದರ ಬದಲಿಗೆ ಜೀವಾಮೃತ, ಹಸಿರೆಲೆ ಗೊಬ್ಬರ ಮತ್ತು ಕೊಟ್ಟಿಗೆ ಗೊಬ್ಬರ ಬಳಸುವುದರಿಂದ ಅಧಿಕ ಲಾಭ ಪಡೆಯಬಹುದು. ಮಧುಮೇಹ ಮತ್ತು ರಕ್ತದೊತ್ತಡ ಕಾಯಿಲೆಗಳಿಗೆ ಬೆಲ್ಲದ ಹಣ್ಣು ಬಳಕೆ ಮಾಡುವುದರಿಂದ ರೋಗವನ್ನು ನಿಯಂತ್ರಣದಲ್ಲಿಡ ಬಹುದು ಎಂದರು.

ಹಾರನಹಳ್ಳಿ ಕೋಡಿಮಠ ಮಹಾ ಸಂಸ್ಥಾನ ಮಠದ ಶ್ರೀ ಚೇತನ್ ಮರಿದೇವರು ಸನ್ನಿದಿ ಉತ್ತರಾಧಿಕಾರಿಗಳು ಮಾತನಾಡಿ, ಆಸೆಗೆ ತಕ್ಕಂತೆ ಬದುಕು ಕಟ್ಟಿಕೊಳ್ಳುವುದನ್ನು ಕಲಿಯಬೇಕು. ಮಾನವರನ್ನು ಕತ್ತಲೆಯಿಂದ ಬೆಳಕಿನಡೆಗೆ ಕೊಂಡೊಯುವುದೇ ಜಾತ್ರೆ. ಇಂತಹ ಜಾತ್ರೆಗಳು ಸಂಬಂಧಗಳನ್ನು ಬೆಸೆಯುವ ಕಾರ್ಯಕ್ರಮವಾಗಿದೆ. ಕೃಷಿಕರ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಸಿಕ್ಕರೂ ಅದು ಮಧ್ಯವರ್ತಿಗಳ ಪಾಲಾಗುತ್ತಿದೆ ಎಂದು ವಿಷಾದಿಸಿದರು.

ಗ್ರಾಪಂ.ಮಾಜಿ ಅಧ್ಯಕ್ಷ ಜಿ.ಅಶೋಕ್‌ಕುಮಾರ್, ಹೆಚ್.ಎಮ್.ಸೋಮಶೇಖರ್, ಶ್ರೀ ಸೋಮೆಶ್ವರ ಸ್ವಾಮಿ ವಿಶ್ವಸ್ಥ ಮಂಡಳಿ ಅಧ್ಯಕ್ಷ ಬಿ.ಎಸ್.ಯೋಗಿಶಪ್ಪ, ಮಹೇಶ್ವರ ಜಾತ್ರಾ ಸಮಿತಿ ಅಧ್ಯಕ್ಷ ಶೇಖರಪ್ಪ, ಅಭಿವೃದ್ಧಿ ಅಧಿಕಾರಿ ಚನ್ನಪ್ಪ, ಬಿಜೆಪಿ ಮುಖಂಡ ವಡೇರಹಳ್ಳಿ ಅಶೋಕ್, ಅಯ್ಯನಹಳ್ಳಿ ಹಿರೇಮಠದ ಉತ್ತರಾಧಿಕಾರಿ ಶ್ರೀಪ್ರಶಾಂತ್ ಮರಿದೇವರು, ನಿರ್ಮಲ ದೇವರಾಜ್, ಶಿವಮೂರ್ತಿ, ಮಲ್ಲೇಗೌಡ, ಕಂಬಳಿ ದೇವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net