

ಹುಣಸೂರು: ತಂಬಾಕು ಮಾರುಕಟ್ಟೆಯ ವಿವಿಧ ಫ್ಲಾಟ್‌ಫಾರ್ಮ್‌ಗಳಿಗೆ ನೂತನವಾಗಿ ಆಯ್ಕೆಯಾಗಿರುವ ಕಾಫ್(ಕಮಿಟಿ ಆಫ್ ಫಾರ್ಮರ್ಸ್) ಸಮಿತಿ ಸದಸ್ಯರನ್ನು ರೈತಸಂಘ ಮತ್ತು ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ನಗರದ ಎಪಿಎಂಸಿ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ನೂತನ ಸದಸ್ಯರನ್ನು ಸನ್ಮಾನಿಸಿ ಮಾತನಾಡಿದ ರೈತ ಸಂಘದ ಜಿಲ್ಲಾಧ್ಯಕ್ಷ ಹೊಸೂರು ಕುಮಾರ್, ನೂತನ ಸದಸ್ಯರು ತಂಬಾಕು ಮಂಡಳಿ ಜತೆಗೂಡಿ ಮುಂಬರುವ ದಿನಗಳಲ್ಲಿ ರೈತರಿಗೆ ಉತ್ತಮ ಗೊಬ್ಬರ ಸಕಾಲಕ್ಕೆ ಲಭಿಸುವಂತೆ ಮಾಡಬೇಕು. ಮಾರುಕಟ್ಟೆ ಬೆಲೆಗಿಂತ ಕಡಿಮೆ ಬೆಲೆಯಲ್ಲಿ ಕೊಡಿಸಬೇಕು ಎಂದು ಸಲಹೆ ನೀಡಿದರು.
ತಂಬಾಕು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎಚ್.ಶಿವಣ್ಣ ಮಾತನಾಡಿ, ರೈತಪರ ನಿಲುವುಗಳನ್ನು ತೆಗೆದುಕೊಳ್ಳುವುದೇ ಸಮಿತಿ ಉದ್ದೇಶವಾಗಬೇಕು ಎಂದು ಹೇಳಿದರು.
ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಉಂಡುವಾಡಿ ಸಿ. ಚಂದ್ರೇಗೌಡ, ಕಾರ್ಯದರ್ಶಿ ನಿಲುವಾಗಿಲು ಎನ್. ಪ್ರಭಾಕರ್, ರೈತಸಂಘದ ತಾಲೂಕು ಕಾರ್ಯದರ್ಶಿ ಅಗ್ರಹಾರ ರಾಮೇಗೌಡ, ಮುಖಂಡರಾದ ಅರಸು ಕಲ್ಲಹಳ್ಳಿ ಜಯಣ್ಣ, ಕೊಪ್ಪಲು ಚಿಕ್ಕೇಗೌಡ, ಅಗ್ರಹಾರ ಸತೀಶ್, ಹರೀಶ್ ಮರೂರು ಕಾವಲು, ಕೃಷ್ಣೇಗೌಡ ಇತರರಿದ್ದರು.
ಕಾಫ್ ಸಮಿತಿ ಸದಸ್ಯರಿವರು: ಎಚ್.ಡಿ.ಕೋಟೆ ಫ್ಲಾಟ್‌ಫಾರ್ಮ್ ನಂ.1-ಪರಶಿವಮೂರ್ತಿ, ಕಟ್ಟೆಮಳಲವಾಡಿ ಫ್ಲಾಟ್‌ಫಾರ್ಮ್ 2-ವೆಂಕಟೇಶ್, ಕಟ್ಟೆಮಳಲವಾಡಿ ಫ್ಲಾಟ್‌ಫಾರ್ಮ್ 3-ರವಿಗೌಡ, ಕಗ್ಗುಂಡಿ ಫ್ಲಾಟ್‌ಫಾರ್ಮ್ 4-ಚಂದ್ರು , ಕಗ್ಗುಂಡಿ 5-ವೀರಭದ್ರೇಗೌಡ, ಕಗ್ಗುಂಡಿ 6- ರಾಜಶೇಖರ್, ಚಿಲ್ಕುಂದ ಫ್ಲಾಟ್‌ಫಾರ್ಮ್ 62-ಮಹೇಶ್, ರಾಮನಾಥಪುರ ಫ್ಲಾಟ್‌ಫಾರ್ಮ್ 7-ಮಲ್ಲೇಶ್, ಕಟ್ಟೆಮಳಲವಾಡಿ ಫ್ಲಾಟ್‌ಫಾರ್ಮ್ 64-ಕಲ್ಪನಾ, ರಾಮನಾಥಪುರ ಫ್ಲಾಟ್‌ಫಾರ್ಮ್ 67-ಶಂಕರೇಗೌಡ.