ಮಿಶ್ರ ಬೆಳೆ ಬೆಳೆಯುವತ್ತ ರೈತರು ಗಮನಹರಿಸಲಿ

ಬೆಟ್ಟದಪುರ ಸಮೀಪದ ಭುವನಹಳ್ಳಿ ಗ್ರಾಮದ ಪ್ರಗತಿಪರ ರೈತ ಜವರೇಗೌಡ ಅವರ ಅಡಕೆ ತೋಟದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರಾಮೇಗೌಡ, ವೈ.ಪ್ರಸಾದ್, ರಾಜೇಗೌಡ, ಡಾ.ಸೋಮಯ್ಯ, ಚಂದ್ರೇಗೌಡ, ಸ್ವಾಮಿಗೌಡ, ಬಿ.ಜೆ ದೇವರಾಜ್, ಚಂದ್ರಪ್ಪ, ವೆಂಕಟೇಶ್ ಇದ್ದರು.
ಬೆಟ್ಟದಪುರ ಸಮೀಪದ ಭುವನಹಳ್ಳಿ ಗ್ರಾಮದ ಪ್ರಗತಿಪರ ರೈತ ಜವರೇಗೌಡ ಅವರ ಅಡಕೆ ತೋಟದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ರಾಮೇಗೌಡ, ವೈ.ಪ್ರಸಾದ್, ರಾಜೇಗೌಡ, ಡಾ.ಸೋಮಯ್ಯ, ಚಂದ್ರೇಗೌಡ, ಸ್ವಾಮಿಗೌಡ, ಬಿ.ಜೆ ದೇವರಾಜ್, ಚಂದ್ರಪ್ಪ, ವೆಂಕಟೇಶ್ ಇದ್ದರು.
Published on

ಬೆಟ್ಟದಪುರ: ರೈತರು ಒಂದು ಬೆಳೆಗೆ ಸೀಮಿತವಾಗುವ ಬದಲು ಮಿಶ್ರ ಬೆಳೆ ಬೆಳೆಯುವ ಮೂಲಕ ಹೆಚ್ಚಿನ ಆದಾಯ ಹೊಂದಬಹುದು ಎಂದು ಮೈಸೂರಿನ ಇಲವಾಲದಲ್ಲಿರುವ ತೋಟಗಾರಿಕೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ರಾಮೇಗೌಡ ತಿಳಿಸಿದರು.

ಸಮೀಪದ ಭುವನಹಳ್ಳಿ ಗ್ರಾಮದ ಪ್ರಗತಿಪರ ರೈತ ಹಾಗೂ ವಕೀಲ ಬಿ.ವಿ.ಜವರೇಗೌಡ ಅವರ ಅಡಕೆ ತೋಟದಲ್ಲಿ ಇತ್ತೀಚೆಗೆ ಕೃಷಿಕ ಸಮಾಜ, ಕೃಷಿ ಇಲಾಖೆ, ರೋಟರಿ ಮಿಡ್‌ಟೌನ್ ಹಾಗೂ ಇತರ ಇಲಾಖೆಗಳ ಸಹಯೋಗದಲ್ಲಿ ಆಯೋಜಿಸಿದ್ದ ರೈತ ದಿನಾಚರಣೆಯಲ್ಲಿ ಮಾತನಾಡಿದ ಅವರು, ಕೃಷಿ ಕ್ಷೇತ್ರ ವಿಸ್ತಾರವಾಗಿ ಬೆಳೆಯುತ್ತಿದ್ದರೂ ಕೃಷಿ ಭೂಮಿ ಕಡಿಮೆಯಾಗುತ್ತಿದೆ. ಸರ್ಕಾರಿ ಸವಲತ್ತು ಬಳಕೆ ಮಾಡಿಕೊಂಡು ಲಾಭದಾಯಕ ಬೆಳೆ ಬೆಳೆಯಲು ಉತ್ತೇಜನ ದೊರೆಯಬೇಕು. ಜತೆಗೆ ಪದಾರ್ಥಗಳಿಗೆ ರೈತರೇ ಬೆಲೆ ನಿಗದಿಪಡಿಸುವಂತಾಗಬೇಕು ಎಂದರು.

ತಾಲೂಕು ಸಹಾಯಕ ಕೃಷಿ ನಿರ್ದೇಶಕ ವೈ.ಪ್ರಸಾದ್ ಮಾತನಾಡಿ, ಹೆಚ್ಚು ಕೊಳವೆ ಬಾವಿಗಳನ್ನು ತೋಡುತ್ತಿರುವುದರಿಂದ ಅಂತರ್ಜಲ ಕುಸಿಯುತ್ತಿದೆ. ರೈತರು ತಮ್ಮ ಜಮೀನಿನ ಸುತ್ತ ಗಿಡಗಳನ್ನು ನೆಟ್ಟು ಕೃಷಿ ಹೊಂಡ ಮಾಡಿ ಅಂತರ್ಜಲ ಹೆಚ್ಚಿಸಬೇಕು. ಅಲ್ಲದೆ ಇದಕ್ಕಾಗಿ ಕೃಷಿ ಇಲಾಖೆಯಿಂದ ಕೃಷಿ ಭಾಗ್ಯ ಎಂಬ ಯೋಜನೆ ಜಾರಿಯಾಗಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ರೈತರಾದ ರಮೇಶ್, ಚಂದ್ರೇಗೌಡ, ಹೇಮಲತಾ, ತಾಯಮ್ಮ ಅವರನ್ನು ಸನ್ಮಾನಿಸಲಾಯಿತು. ಬಳಿಕ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಪ್ರಸಾದ್ ಅವರನ್ನು ರೈತ ಸಂಘಟನೆ ಮುಖಂಡರು ಹಸಿರು ಶಾಲು ಹೊದಿಸಿ ಸನ್ಮಾನಿಸಿದರು.

ರೋಟರಿ ಮಿಡ್‌ಟೌನ್ ಮಾಜಿ ಅಧ್ಯಕ್ಷ ತಿರುಮಲಾಪುರ ರಾಜೇಗೌಡ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸೋಮಯ್ಯ, ರೇಷ್ಮೆ ಇಲಾಖೆಯ ರೇಷ್ಮೆ ವಿಸ್ತರಣಾಧಿಕಾರಿ ಚಂದ್ರೇಗೌಡ, ತೋಟಗಾರಿಕಾ ಅಧಿಕಾರಿ ಕರಿಗೌಡ, ಹಿರಿಯ ವಕೀಲ ಬಿ.ವಿ ಜವರೇಗೌಡ, ಕೃಷಿ ಅಧಿಕಾರಿಗಳಾದ ನವ್ಯನಾಣಯ್ಯ, ಮಹೇಶ್, ಹಿತೇಶ್, ಪ್ರವೀಣ್, ತಾಲೂಕು ರೋಟರಿ ಮಿಡ್ ಟೌನ್ ಕಾರ್ಯದರ್ಶಿ ಐಕೆಪಿ ಹೆಗಡೆ, ರೈತ ಮುಖಂಡರಾದ ಸ್ವಾಮಿಗೌಡ, ಬಿ.ಜೆ ದೇವರಾಜ್, ಚಂದ್ರಪ್ಪ, ವೆಂಕಟೇಶ್, ಶಫಿ, ಸಣ್ಣಸ್ವಾಮಿಗೌಡ, ವಿಜಯಅರಸ್, ಗುರು, ದಶರಥ ,ರಾಮೇಗೌಡ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net