ದೇಸಿ ತಳಿ ಆಕಳು ಸಾಕಾಣಿಕೆಗೆ ರೈತರು ಮುಂದಾಗಲಿ

27Mamadapur1
Published on

ಮಮದಾಪುರ: ಸಮೀಪದ ಬೆಣಚಿನಮರಡಿ(ಕೊ) ಗ್ರಾಮದಲ್ಲಿ ಶ್ರೀ ಕಟ್ಟಿ ವಿಠ್ಠಪ್ಪ ಜಾತ್ರಾ ಮಹೋತ್ಸವ ಅಂಗವಾಗಿ ಹಮ್ಮಿಕೊಂಡಿದ್ದ ದೇಸಿ ಆಕಳು, ಹೋರಿ ಹಾಗೂ ಎತ್ತುಗಳ ಪ್ರದರ್ಶನ ಸೋಮವಾರ ಸಮಾರೋಪಗೊಂಡಿತು.

ಬೆಳಗ್ಗೆ 6 ಗಂಟೆಗೆ ಶ್ರೀ ಕಟ್ಟಿ ವಿಠ್ಠಪ್ಪ ದೇವರ ಗದ್ದುಗೆಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಬೆಳಗ್ಗೆ 10 ರಿಂದ ಸಂಜೆ 6 ಗಂಟೆ ವರೆಗೆ ಪರದೇಶಿ&ನಾಗೇಶಿ ಚೌಡಕಿ ಗಾಯನ ಜರುಗಿತು. ಸ್ಥಳಿಯ ಶಿವಾನಂದ ಹಿರೇಮಠ ಸಾನ್ನಿಧ್ಯದಲ್ಲಿ ಆಯೋಜಿಸಿದ್ದ ದೇಸಿ ಆಕಳು, ಹೋರಿ ಹಾಗೂ ಎತ್ತುಗಳ ಪ್ರದರ್ಶನಕ್ಕೆ ಮುಖಂಡ ಲಗಮನಗೌಡ ಪಾಟೀಲ ಚಾಲನೆ ನೀಡಿದರು.

ದೇಸಿ ಆಕಳು ಪ್ರದರ್ಶನದಲ್ಲಿ ಅಥಣಿ ತಾಲೂಕಿನ ಸುಟ್ಟಟ್ಟಿ ಗ್ರಾಮದ ರಾಯಪ್ಪ ಕೋತ ಪ್ರಥಮ 10,000 ರೂ, ಸಾವಳಗಿ ಗ್ರಾಮದ ಲಕ್ಕಪ್ಪ ಪಾರತನಹಳ್ಳಿ ದ್ವೀತಿಯ 8,000 ರೂ. ಹಾಗೂ ತೃತೀಯ ಬಹುಮಾನ ಪಡೆದ ಜೋಕಾನಟ್ಟಿ ಗ್ರಾಮದ ಲಕ್ಕಪ್ಪ ಮಾಳಪ್ಪಗೋಳ ಅವರಿಗೆ 6,000 ರೂ. ನಗದು ಬಹುಮಾನ ವಿತರಿಸಲಾಯಿತು. ಒಟ್ಟು 35 ವಿಜೇತರು ಬಹುಮಾನ ಪಡೆದರು.

ಬಹುಮಾನ ಪಡೆದ ರೈತ ರಾಯಪ್ಪ ಕೋತ ಮಾತನಾಡಿ, ಬೆಣಚಿನಮರಡಿ ಗ್ರಾಮದಲ್ಲಿ ಜಾತ್ರೋತ್ಸವದ ಅಂಗವಾಗಿ ದೇಸಿ ತಳಿಯ ಆಕಳು, ಹೋರಿ ಹಾಗೂ ಎತ್ತುಗಳ ಪ್ರದರ್ಶನ ಆಯೋಜಿಸಿರುವುದು ಮಾದರಿ ಕಾರ್ಯವಾಗಿದೆ. ರೈತರು ದೇಸಿ ತಳಿ ಆಕಳು ಸಾಕಾಣಿಕೆಗೆ ಮುಂದಾಗಬೇಕು ಎಂದರು.

ಮುಖಂಡರಾದ ಯಲ್ಲಪ್ಪ ಮಾಳಗಿ, ಹೊನ್ನಪ್ಪ ಜಗಾನಟ್ಟಿ, ಸಿದ್ದಪ್ಪ ಸಜ್ಜಿ, ವಿಠ್ಠಲ ಪೂಜೇರಿ, ಸಿದ್ದಪ್ಪ ಕೊತ್ತಲ, ಶಿವಪ್ಪ ಮಾಳಗಿ, ಸಿದ್ದಪ್ಪ ಬೀರನಗಡ್ಡಿ, ಮಾರುತಿ ರಂಗನ್ನವರ, ಮಲ್ಲಪ್ಪ ರುದ್ರಪ್ಪಗೋಳ ಇತರರಿದ್ದರು.

ೋಟೋ:27ಮಮದಾಪುರ1: ಬೆಣಚಿನಮರಡಿ(ಕೊ) ಗ್ರಾಮದಲ್ಲಿ ಕಟ್ಟಿ ವಿಠ್ಠಪ್ಪ ಜಾತ್ರೆ ಅಂಗವಾಗಿ ಹಮ್ಮಿಕೊಂಡಿದ್ದ ದೇಸಿ ಆಕಳು, ಹೋರಿ ಹಾಗೂ ಎತ್ತುಗಳ ಪ್ರದರ್ಶನದಲ್ಲಿ ವಿಜೇತ ರೈತರಿಗೆ ಗಣ್ಯರು ಬಹುಮಾನ ವಿತರಿಸಿದರು. ಯಲ್ಲಪ್ಪ ಮಾಳಗಿ, ರಾಯಪ್ಪ ಕೋತ, ಸಿದ್ದಪ್ಪ ಕೊತ್ತಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net