

ಶಿಗ್ಗಾಂವಿ: ಸರ್ಕಾರ ರೈತರಿಗಾಗಿ ಕೃಷಿ ಇಲಾಖೆ ಮೂಲಕ ಸಹಾಯಧನದಡಿ ಗುಣಮಟ್ಟದ ಬಿತ್ತನೆ ಬೀಜಗಳನ್ನು ಪೂರೈಸುತ್ತಿದೆ. ರೈತರು ಸಂಯಮದಿಂದ ಅಗತ್ಯ ದಾಖಲೆಗಳನ್ನು ಪೂರೈಸಿ ಬೀಜಗಳನ್ನು ಪಡೆದುಕೊಳ್ಳಬೇಕು ಎಂದು ಶಾಸಕ ಯಾಸೀರಖಾನ್ ಪಠಾಣ ಹೇಳಿದರು.
ತಾಲೂಕಿನ ದುಂಡಸಿ ರೈತ ಸಂಪರ್ಕ ಕಚೇರಿಯಲ್ಲಿ ಶನಿವಾರ ಕೃಷಿ ಇಲಾಖೆಯ ಸಹಾಯಧನದಡಿ ರೈತರಿಗೆ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ರೈತರಿಗಾಗಿ ಸಹಾಯಧನದ ರೂಪದಲ್ಲಿ ಸರ್ಕಾರ ಕೈಗೊಂಡಿರುವ ಯೋಜನೆಗಳು ದುರುಪಯೋಗ ಆಗದಂತೆ ಅಧಿಕಾರಿಗಳು ಸಮರ್ಪಕವಾಗಿ ಕಾರ್ಯರೂಪಕ್ಕೆ ತರುವ ಕೆಲಸ ಮಾಡಬೇಕು. ಜೊತೆಗೆ ರೈತರು, ಜನಸಾಮಾನ್ಯರೂ ಅಧಿಕಾರಿಗಳೊಂದಿಗೆ ಉತ್ತಮ ಸಂಪರ್ಕ ಹೊಂದುವ ಮೂಲಕ ಸರ್ಕಾರದ ಯೋಜನೆಗಳನ್ನು ಪಡೆದುಕೊಂಡು ಆರ್ಥಿಕವಾಗಿ ಸದೃಢಗೊಳ್ಳಬೇಕು ಎಂದರು.
ತಹಸೀಲ್ದಾರ್ ರವಿಕುಮಾರ ಕೋರವರ, ಸಹಾಯಕ ಕೃಷಿ ನಿರ್ದೇಶಕ ಕೊಟ್ರೇಶ ಗೆಜಲಿ, ಶಿವಾನಂದ ದಾವಣಗೆರೆ, ಕೃಷಿಕ ಸಮಾಜದ ಅಧ್ಯಕ್ಷ ಹನುಮರೆಡ್ಡಿ ನಡುವಿನಮನಿ, ವೀರಣ್ಣ ಸಮಗೋಂಡ, ಮುತ್ತಣ್ಣ ಗುಡಗೇರಿ, ಮಾಲತೇಶ ಬಾರಕೇರ. ಮಂಜುನಾಥ ಹಾವೇರಿ, ಸಂತೋಷ ಚಾಕಲಬ್ಬಿ, ಶಿವಾನಂದ ದಾವಣಗೇರಿ, ಅಣ್ಣಪ್ಪ ಲಮಾಣಿ, ನಾಗರಾಜ ದೇಸಾಯಿ, ಪ್ರಕಾಶ ಪಾಸಾರ, ಇತರರಿದ್ದರು.