ಕರೊನಾ ವೈರಸ್ನ ಬಗ್ಗೆ ಆತಂಕ ಬೇಡ

SALDAPUR
Published on

ಶಹಾಪುರ: ಕರೊನಾ ವೈರಸ್ ಬಗ್ಗೆ ರೈತರು ಯಾವುದೇ ಕಾರಣಕ್ಕೂ ಆತಂಕ ಒಳಗಾಗಬಾರದು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಮನವಿ ಮಾಡಿದರು.

ಗುರುವಾರ ತಾಲೂಕಿನ ಸಲಾದಪುರ ಗ್ರಾಮದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 2018-1ನೇ ಪರಿಶಿಷ್ಟ ಜಾತಿ ಯೋಜನೆಯಡಿ ಜಲಾನಯನ ಪ್ರದೇಶದ ಆಣೆಕಟ್ಟು ನಿಮರ್ಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, 1 ಕೋಟಿ ರೂ. ವೆಚ್ಚದಲ್ಲಿ ನಿಮರ್ಾಣ ಮಾಡಲಾಗುತ್ತಿರುವ ಈ ಆಣೆಕಟ್ಟು, 40 ಮೀಟರ್ ಉದ್ದ, 2 ಮೀಟರ್ ಎತ್ತರವಿದೆ ಎಂದರು.

ಆಣೆಕಟ್ಟು ನಿಮರ್ಾಣದಿಂದ ಭವಿಷ್ಯದಲ್ಲಿ 40 ಹೆಕ್ಟೇರ್ ಪ್ರದೇಶಕ್ಕೆ ನೀರಿನ ಸೌಲಭ್ಯ ಸಿಗಲಿದೆ. ಕಾಮಗಾರಿಯನ್ನು ಅಧಿಕಾರಿಗಳು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಇದಲ್ಲದೆ 1.50 ಕೋಟಿ ರೂ.ಗಳ ವೆಚ್ಛದಲ್ಲಿ ಹೊತಪೇಠ ಹಳ್ಳಕ್ಕೆ ಆಣೆಕಟ್ಟು ಹಾಗೂ 1.30 ಕೋಟಿ ರೂ.ವೆಚ್ಛದಲ್ಲಿ ಮದ್ರಕಿ ಹಳ್ಳಕ್ಕೆ ಆಣೆಕಟ್ಟು ನಿರ್ಮಾಣಕ್ಕೆ ಅನುದಾನ ಮಂಜೂರು ಮಾಡುವಂತೆ ಈಗಾಗಲೇ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗಿದೆ ಎಂದರು.

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮರಿಗೌಡ ಹುಲ್ಕಲ್, ಮುಖಂಡರಾದ ಶರಣಪ್ಪ ಸಲಾದಪುರ, ಸಣ್ಣ ನೀರಾವರಿ ಉಪವಿಭಾಗದ ಅಭಿಯಂತರ ಬಸವರಾಜಪ್ಪ ಪಾಟೀಲ್, ಜೆಇ ಮೀರಜುಲ್ ಹಕ್, ಸಿ.ಯಂಕಪ್ಪ ಟಣಕೇದಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net