ಶಾಸಕ, ಸಂಸದರ ವಿರುದ್ಧ ರೈತರ ಅಸಮಾಧಾನ

FAMRER
Published on

ಲಕ್ಷ್ಮೇಶ್ವರ: ಕೇಂದ್ರ ಬರ ಅಧ್ಯಯನ ತಂಡ ಆಗಮಿಸಿದ ವೇಳೆ ಕ್ಷೇತ್ರದ ಶಾಸಕರು, ಸಂಸದರು ಗೈರಾಗಿದ್ದರಿಂದ ರೈತ ಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಕ್ಷಾತೀತ ರೈತಪರ ಹೋರಾಟ ವೇದಿಕೆ ಅಧ್ಯಕ್ಷ ಮಹೇಶ ಹೊಗೆಸೊಪ್ಪಿನ ಮಾತನಾಡಿ, ‘ಕೇಂದ್ರದ ಅಧಿಕಾರಿಗಳಿಗೆ ಕನ್ನಡ ತಿಳಿಯುವುದಿಲ್ಲ. ರೈತರಿಗೆ ಕನ್ನಡ ಬಿಟ್ಟು ಬೇರೆ ಭಾಷೆ ಬರುವುದಿಲ್ಲ. ಇಂಗ್ಲಿಷ್, ಹಿಂದಿ ಬಲ್ಲ ಶಾಸಕರು ಹಾಗೂ ಸಂಸದರು ಸ್ಥಳದಲ್ಲಿದ್ದು ರೈತರ ಕಷ್ಟ-ನಷ್ಟಗಳ ಬಗ್ಗೆ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕಿತ್ತು. ವಸ್ತುಸ್ಥಿತಿ ಅಧ್ಯಯನಕ್ಕೆ ಬಂದ ಅಧಿಕಾರಿಗಳು ಸಮಾಧಾನದಿಂದ ರೈತರ ಕಷ್ಟ ಕೇಳಲಿಲ್ಲ. ಬಂದಪುಟ್ಟ ಹೋದಪುಟ್ಟ ಎಂಬಂತೆ ಅಧಿಕಾರಿಗಳ ತಂಡ ಬಂದು ಹೋಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ರೈತರಿಗೆ ನ್ಯಾಯ ಒದಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಟಾಕಪ್ಪ ಸಾತಪುತೆ, ಶಿವಾನಂದ ಲಿಂಗಶೆಟ್ಟಿ, ರಾಮಣ್ಣ ಗೌರಿ, ಕರಿಯಪ್ಪ ಹುರಕನವರ, ಶೇಖಣ್ಣ ಗೋಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net