ಕೃಷಿ ಚಟುವಟಿಕೆಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ರೈತರ ಆಗ್ರಹ

CURRENT PROTEST
ಸಮರ್ಪಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ಬೆಟಗೀರಿ ಜೆಸ್ಕಾಂ ಕಚೇರಿ ಎದುರು ರೈತರು ಪ್ರತಿಭಟನೆ ನಡೆಸಿದರು. ರೈತರಾದ ಮಲ್ಲಪ್ಪ, ಏಳುಕೋಟೇಶ, ಹನುಮಂತ, ಅಂದಪ್ಪ, ಕೊಟ್ರೇಶ, ಉಮೇಶ ಇತರರು ಇದ್ದರು.
Published on

ಅಳವಂಡಿ: ಸಮರ್ಪಕ ವಿದ್ಯುತ್ ಪೂರೈಕೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ರೈತರು ಬೆಟಗೇರಿ ಗ್ರಾಮದ ಜೆಸ್ಕಾಂ ಕಚೇರಿಯನ್ನು ಶನಿವಾರ ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

ಕೆಲ ದಿನಗಳಿಂದ ಕೃಷಿ ಚಟುವಟಿಕೆಗೆ ನೀಡುತ್ತಿರುವ ವಿದ್ಯುತ್‌ನಲ್ಲಿ ಭಾರಿ ಏರಿಳಿತ ಉಂಟಾಗುತ್ತಿದೆ. ಲೈನ್‌ಗಳು ಓವರ್‌ಲೋಡ್ ಆಗಿ ಪದೇಪದೆ ವಿದ್ಯುತ್ ನಿಲುಗಡೆಯಾಗುತ್ತಿದೆ. ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ರೈತರು ಸಂಕಷ್ಟ ಎದುರಿಸುವಂತಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದರು.

ಸಮರ್ಪಕ ವಿದ್ಯುತ್ ಪೂರೈಕೆ ಹಾಗೂ ಮಾರ್ಗದಾಳುಗಳು (ಲೈನಮನ್)ಗಳ ನೇಮಕ, ಬೆಟಗೇರಿ ಜೆಸ್ಕಾಂ ಕಚೇರಿಯಲ್ಲಿ ರೈತರ ಸಮಸ್ಯಗಳಿಗೆ ಸ್ಪಂದಿಸುವ ಸಹಾಯವಾಣಿ ಆರಂಭ ಹಾಗೂ ಜೆಸ್ಕಾಂ ಎಸ್‌ಒ ಬೆಟಗೇರಿಯಲ್ಲಿ ಇರಬೇಕು ಎಂದು ಆಗ್ರಹಿಸಿದರು.

ರೈತರು ಸುಮಾರು 8 ತಾಸು ಪ್ರತಿಭಟನೆ ನಡೆಸಿದ ನಂತರ ಸ್ಥಳಕ್ಕೆ ಆಗಮಿಸಿದ ಎಇಇ ಸಲೀಂ ಹಾಗೂ ಇತರ ಅಧಿಕಾರಿಗಳು ರೈತರ ಸಮಸ್ಯಗಳಿಗೆ ಸ್ಪಂದಿಸಿ ಇಬ್ಬರು ಲೈನಮನ್‌ಗಳ ನಿಯೋಜನೆ ಹಾಗೂ ಸಹಾಯವಾಣಿ ವ್ಯವಸ್ಥೆ, ರೈತರಿಗೆ ಎರಡು ಪಾಳಿಯಲ್ಲಿ 5ರಿಂದ 12 ರವರೆಗೆ, 12ರಿಂದ 7ರವರೆಗೆ ವಿದ್ಯುತ್ ಪೂರೈಸುವ ಭರವಸೆ ನೀಡಿದರು. ಬಳಿಕ ರೈತರು ಪ್ರತಿಭಟನೆ ಹಿಂಪಡೆದರು.

ರೈತರಾದ ಮಲ್ಲಪ್ಪ ಯತ್ನಳ್ಳಿ, ಹನುಮಂತ ಬೇಲಡಗಿ, ಅಂದಪ್ಪ ಹೂಗಾರ, ಕೊಟ್ರೇಶ ಗೋರೆಬಾಳ, ಉಮೇಶ ಕಡಳ್ಳಿ, ಹನುಮಂತ ಮೋರನಾಳ, ರಮೇಶ ಚಿಂಚಲಿ, ರಾಜು ಯತ್ನಳ್ಳಿ, ಅಂದಪ್ಪ, ಏಳುಕೋಟೇಶ, ಪ್ರದೀಪ ಯತ್ನಳ್ಳಿ, ಹಾಲೇಶ ಬೆಟಗೇರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net