

ವಿಜಯವಾಣಿ ಸುದ್ದಿಜಾಲ ಧಾರವಾಡ
ರೈತರ ಜಮೀನಿನ ಪಹಣಿ ಪತ್ರಿಕೆಯಲ್ಲಿ ವಕ್ಫ್ ಆಸ್ತಿ ಎಂದು ನಮೂದಾಗಿರುವುದನ್ನು ವಿರೋಽಸಿ ತಾಲೂಕಿನ ಉಪ್ಪಿನಬೆಟಗೇರಿ ಗ್ರಾಮಸ್ಥರು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ನೇತೃತ್ವದಲ್ಲಿ ನಗರದ ವಕ್ಫ್ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಉಪ್ಪಿನ ಬೆಟಗೇರಿ ಗ್ರಾಮದ ಮುಸ್ಲಿಂ ಮಕಾನ್ ಆಸ್ತಿಗೆ ಸಂಬ0ಧಿಸಿ ವಕ್ಫ್ ಬೋರ್ಡ್ ನೋಟಿಸ್ ಹೆಚ್ಚಿದೆ. ಆಸ್ತಿಯ ಚಕ್‌ಬಂದಿ ರಚಿಸಿ ಆಸ್ತಿ ಎಲ್ಲಿಂದ ಎಲ್ಲಿಯವರೆಗೆ ಇದೆ ಎಂದು ನಮೂದಿಸಲಾಗಿದೆ. ಆದರಲ್ಲಿ ನಮೂದಾದ ಪ್ರಕಾರ ಉಪ್ಪಿನ ಬೆಟಗೇರಿಯ ಹಲವಾರು ಮನೆಗಳು ವಕ್ಫ್ ಆಸ್ತಿಗೆ ಒಳಪಡುತ್ತವೆ. ಇದನ್ನು ಗಮನಿಸಿದ ಗ್ರಾಮಸ್ಥರು ಧಾರವಾಡದ ವಕ ಕಚೇರಿಗೆ ಮುತ್ತಿಗೆ ಹಾಕಿ ವಕ್ಫ್ ಅಧಿಕಾರಿ ತಾಜುದ್ದೀನ್ ಶೇಖ್ ಅವರನ್ನು ತರಾಟೆಗೆ ತೆಗೆದುಕೊಂಡರು. ಯಾರನ್ನು ಕೇಳಿ ಚಕ್‌ಬಂದಿ ರಚಿಸಿದ್ದೀರಿ? ನಿಮ್ಮಿಷ್ಟದಂತೆ ಚಕ್‌ಬಂದಿ ರಚಿಸುತ್ತ ಹೋದರೆ ನಾವೆಲ್ಲ ಮನೆ ಬಿಟ್ಟು ಹೋಗಬೇಕಾಗುತ್ತದೆ. ಕೂಡಲೇ ಅದನ್ನು ರದ್ದುಪಡಿಸಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ಮಾಡಲಾಗುವುದು ಎಂದು ಗ್ರಾಮಸ್ಥರು ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಚಕ್‌ಬ0ದಿ ನೋಟಿಸ್ ಅನ್ನು ಮರುಪರಿಶೀಲಿಸಲಾಗುವುದು ಎಂದು ವಕ್ಫ್ ಅಧಿಕಾರಿ ತಾಜುದ್ದೀನ್ ಶೇಖ್ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಪ್ರಮೋದ್ ಮುತಾಲಿಕ್, ಬಿಜೆಪಿ ಮುಖಂಡರಾದ ಸವಿತಾ ಅಮರಶೆಟ್ಟಿ, ಗ್ರಾಮಸ್ಥರಾದ ಗಂಗಪ್ಪ ಜವಳಗಿ, ನಿಂಗಪ್ಪ ದೀವಟಗಿ, ಈಶ್ವರಪ್ಪ ಜವಳಗಿ, ಶಿವಪ್ಪ ವಿಜಾಪುರ, ರುದ್ರಪ್ಪ ಆಯೆಟ್ಟಿ, ಕರಬಸಪ್ಪ ಜವಳಗಿ, ಬಸಪ್ಪ ಆಯೆಟ್ಟಿ, ಮಂಜುನಾಥ ಗುಡ್ಡದಮನಿ, ಮಹಾದೇವಪ್ಪ ರೇಷ್ಮಿ, ವೀರಣ್ಣ ಪರಾಂಡೆ, ಸೋಮಲಿಂಗಪ್ಪ ಕಿತ್ತೂರ, ಮಡಿವಾಳಪ್ಪ ಸಿಂದೋಗಿ, ಇತರರಿದ್ದರು.