ಹೆಸ್ಕಾಂ ಕಚೇರಿ ಎದುರು ರೈತರ ಪ್ರತಿಭಟನೆ

FARMER PROTEST IN SAVANUR
Published on

ಸವಣೂರ: ರೈತರ ಪಂಪ್​ಸೆಟ್​ಗಳಿಗೆ ಸಮರ್ಪವಾಗಿ ವಿದ್ಯುತ್ ಪೂರೈಸುವಂತೆ ಆಗ್ರಹಿಸಿ ಅಖಂಡ ಕರ್ನಾಟಕ ರೈತ ಸಂಘ ತಾಲೂಕು ಘಟಕದ ವತಿಯಿಂದ ಮಂಗಳವಾರ ಹೆಸ್ಕಾಂ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.

ಮಳೆಗಾಲದಲ್ಲಿ ಸಮರ್ಪಕವಾಗಿ ಮಳೆಯಾಗದೆ ಬಿತ್ತನೆ ಮಾಡಿದ ಬೆಳೆಗಳು ನೀರಿಲ್ಲದೆ ಬಿಸಿಲಿನ ತಾಪಕ್ಕೆ ಕಮರಿ ಹೋಗುತ್ತಿದೆ. ಬೋರ್​ವೆಲ್ ಮೂಲಕ ಬೆಳೆಗಳಿಗೆ ನೀರು ಹರಿಸೋಣ ಎಂದರೆ ಹೆಸ್ಕಾಂ ಸಮರ್ಪಕವಾಗಿ ವಿದ್ಯುತ್ ಪೂರೈಸುತ್ತಿಲ್ಲ. ತಾಲೂಕಿನ ತೆಗ್ಗಿಹಳ್ಳಿ ಗ್ರಾಪಂ ವ್ಯಾಪ್ತಿಯ ಎಫ್ 7 ಮಾರ್ಗ ಹಾಗೂ ಕುಣಿಮೆಳ್ಳಿಹಳ್ಳಿ, ಮನ್ನಂಗಿ, ಕುರುಬರಮಲ್ಲೂರ, ಮೆಳ್ಳಾಗಟ್ಟಿ, ಹುರಳಿಕುಪ್ಪಿ, ಬರದೂರು, ಚಳ್ಳಾಳ, ಮಾವುರು, ಫಕೀರನಂದಿಹಳ್ಳಿ ಗ್ರಾಮಗಳಲ್ಲಿ ರೈತರಿಗೆ ಹಗಲು 7 ತಾಸು ವಿದ್ಯುತ್ ಪೂರೈಸಲು ಕ್ರಮ ಕೈಗೊಂಡು ಇಲಾಖೆ ಸಿಬ್ಬಂದಿಗೆ ಸೂಚನೆ ನೀಡಿ ಅದೇಶವನ್ನು ಮಾಡಬೇಕು. ನಮ್ಮೆಲ್ಲ ಬೇಡಿಕೆಗಳನ್ನು ಒಂದು ವಾರದ ಒಳಗಾಗಿ ಪೂರೈಸಬೇಕು. ಇಲ್ಲವಾದರೆ ಪಟ್ಟಣದ ಇಲಾಖೆಯ ಕಚೇರಿ ಮುಂಭಾಗದಲ್ಲಿ ನಿರಂತರ ಧರಣಿ ಕೈಗೊಳ್ಳಲಾಗುವುದು ಎಂದು ರೈತರು ಮನವಿಯಲ್ಲಿ ಎಚ್ಚರಿಸಿದ್ದಾರೆ.

ರೈತ ಸಂಘ ಜಿಲ್ಲಾ ಘಟಕ ಅಧ್ಯಕ್ಷ ಪ್ರಕಾಶ ರ್ಬಾ, ಎಸ್.ಟಿ. ಕ್ಷೌರದ, ನೀಲಪ್ಪ ಹರಿಜನ, ವಿ.ಎನ್. ಪಾಟೀಲ, ರಾಜಪ್ಪ ತೊಲಕೊಪ್ಪದ, ಶಿವಪುತ್ರಪ್ಪ ಸುಳ್ಳಹಳ್ಳಿ, ನಾಗರಾಜ ಮರಡೂರ, ವಿ.ಎಸ್. ಹಾವಣಗಿ, ಎಸ್.ಎಂ. ಆಡೂರ, ವಿ.ಎನ್. ಪಾಟೀಲ, ರಾಜು ಲಕ್ಕನಗೌಡ್ರ, ಎ.ಸಿ. ಪಾಟೀಲ, ಬಿ.ಬಿ. ಬನ್ನಿ, ಶಂಭು ಸೂರದ, ಬಸವರಾಜ ಹೊಸಳ್ಳಿ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net