

ಬೆಂಗಳೂರು: ಸಾವಿರಾರು ರೈತರು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಡಿಸಿ ಕಚೇರಿ ಮುತ್ತಿಗೆ ಹಾಕಲು ಸಾವಿರಾರು ರೈತರು ಮುಂದಾಗಿದ್ದಾರೆ.
ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪಾದಯಾತ್ರೆಗೆ ಚಾಲನೆ ನೀಡಿದರು. ಮೈ ಮೇಲೆ ಸಗಣಿ ಸುರಿದುಕೊಂಡು ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕನಕಪುರ ರೋಡ್ ನಿಂದ ಪಾದಯಾತ್ರೆ ಮೂಲಕ ಕೆಜಿ ರೋಡ್ ನಲ್ಲಿರುವ ಡಿಸಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ್ದಾರೆ. ಎತ್ತಿನ ಗಾಡಿಗಳ ಮೂಲಕ ಪಾದಯಾತ್ರೆ ಮಾಡಿದ್ದಾರೆ.