

ಚಿತ್ರದುರ್ಗ: ಬೆಂಗಳೂರಲ್ಲಿ ಫೆ.16 ರಂದು ನಡೆಯಲಿರುವ ಜನ ಚಳವಳಿ ಸಂಯುಕ್ತ ಚಲೋ ಕಾರ‌್ಯಕ್ರಮದಲ್ಲಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗವಹಿಸ ಬೇಕೆಂದು ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಸಮಿತಿ ನಿರ್ಧರಿಸಿತು. ಹೋರಾಟದ ಅಂಗವಾಗಿ ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ಕರೆದಿದ್ದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದ ಮುಖಂಡರು,ಜಿಲ್ಲೆಯ ಎಲ್ಲ ತಾಲೂಕುಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಭಾಗ ವಹಿಸುವಂತೆ ಅವರಿಗೆ ಕಾರ‌್ಯಕರ್ತರು ಮನವಿ ಮಾಡಬೇಕೆಂದರು.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಗ್ರಾಮ ಸಮಿತಿಗಳನ್ನು ಪುನಶ್ಚೇತನಗೊಳಿಸಲು ಸಭೆ ನಿರ್ಧರಿಸಿತು. ಕೃಷಿ ಪಂಪ್‌ಸೆಟ್‌ಗಳಿಗೆ ಅಕ್ರಮ- ಸಕ್ರಮ ಯೋಜನೆಯಡಿ ಮೂಲ ಸೌಕರ್ಯ ಒದಗಿಸಬೇಕು. ಒದಗಿಸದಿದ್ದರೆ ಹಣ ಕಟ್ಟಿರುವ ರೈತರಿಗೆ ವಾಪಸ್ ಕೊಡಿಸುವ ಚಳವಳಿಗೆ ನಡೆಸಲು ಹಾಗೂ ಸ ರ್ಕಾರಿ ಆಸ್ಪತ್ರೆಗಳ ನಿರ್ಲಕ್ಷದಿಂದಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಮನಬಂದಂತೆ ರೋಗಿಗಳನ್ನು ಸುಲಿಗೆ ಮಾಡುತ್ತಿರುವು ದ ರ ವಿರುದ್ಧ ಹೋರಾಟ ರೂಪಿ ಸಲು ಸಭೆ ನಿರ್ಣಯಿಸಿತು.
ರಾಜ್ಯರೈತ ಸಂಘದ ಕಾರ‌್ಯಾಧ್ಯಕ್ಷ ಈಚಘಟ್ಟದ ಸಿದ್ಧವೀರಪ್ಪ,ರಾಮರೆಡ್ಡಿ,ಬಸವರಾಜಪ್ಪ,ಸದಾಶಿವಪ್ಪ,ರಾಜಣ್ಣ,ಚಿತ್ತಯ್ಯ,ಸತೀಶ, ಮಂಜುನಾಥ,ಡಿ ಎಸ್.ಹಳ್ಳಿ ಮಲ್ಲಿಕಾರ್ಜುನ್ ಇತರರಿದ್ದರು.