

ವಿಜಯವಾಣಿ ಸುದ್ದಿಜಾಲ ಧಾರವಾಡ
ಬಾಕಿ ಇರುವ ಹಾಲಿನ ಪ್ರೋತ್ಸಾಹಧನವನ್ನು ಸರ್ಕಾರ ಕೂಡಲೇ ಬಿಡುಗಡೆ ಮÁಡಬೇಕು ಎಂದು ಆಗ್ರಹಿಸಿ ಧಾರವಾಡ ಹಾಲು ಒಕ್ಕೂಟದ ಕಚೇರಿ ಎದುರು ರತ್ನ ಭಾರತ ರೈತ ಸಮÁಜದ ಸದಸ್ಯರು ಶುಕ್ರವಾರ ಮಳೆಯಲ್ಲೇ ಪ್ರತಿಭಟನೆ ನಡೆಸಿದರು.
ಸರ್ಕಾರ ರೈತರ ಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಬರ ಪರಿಹಾರವೂ ಪೂರ್ಣ ಪ್ರಮÁಣದಲ್ಲಿ ಬಿಡುಗಡೆ ಮÁಡಿಲ್ಲ. ಹಾಲಿಗೆ ನೀಡುವ ಪ್ರೋತ್ಸಾಹಧನ ಬಿಡುಗಡೆ ಮÁಡದೆ ರೈತರೊಂದಿಗೆ ಚೆಲ್ಲಾಟ ಆಡುವುದು ಸರಿಯಲ್ಲ. ಹಾಲಿನ ಪ್ರೋತ್ಸಾಹಧನ ಬಿಡುಗಡೆ ಕುರಿತು ವಿಧಾನಸಭೆ ಅಽವೇಶನದಲ್ಲಿ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಇಲ್ಲದಿದ್ದರೆ ರೈತ ಚಳವಳಿ ರೂಪಿಸುವ ಮೂಲಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರತ್ನ ಭಾರತ ರೈತ ಸಮÁಜದ ರಾಷ್ಟೀçಯ ಉಪಾಧ್ಯಕ್ಷ ಹೇಮನಗೌಡ ಬಸನಗೌಡರ, ಕುಂದಗೋಳ ತಾಲೂಕು ಅಧ್ಯಕ್ಷ ಬಸವರಾಜ ಯೋಗಪ್ಪನವರ, ವಿಠ್ಠಲ ಘಾಟಗೆ, ಸದಾನಂದ ಪೂಜಾರ, ಸೋಮನಗೌಡ ಫಕ್ಕೀರಗೌಡರ, ರಾಜು ಮಲ್ಲಿಗವಾಡ, ನಾಗಪ್ಪ ಸಿದ್ದನವರ, ಜಯಪ್ಪ ಕಮಡೊಳ್ಳಿ, ಹನುಮಂತಗೌಡ ಗಡಾದ, ಚನ್ನಬಸಪ್ಪ ಸಿದ್ದುನವರ, ಇತರರು ಭಾಗವಹಿಸಿದ್ದರು.