ರೈತರ ಕಣ್ಣೀರಿಗೆ ಭರವಸೆಯೇ `ಪರಿಹಾರ': ಪ್ರತಿಭಟನೆ ವಾಪಸ್​

0703Klb03
Published on

ಕಲಬುರಗಿ: ಹಾನಿಗೀಡಾಗಿರುವ ತೊಗರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಕಳೆದ ಮೂರು ದಿನದಿಂದ ಎತ್ತಿನ ಬಂಡಿ, ಎತ್ತುಗಳೊಂದಿಗೆ ನಗರದಲ್ಲಿ ಜಿಲ್ಲಾ ರೈತ ಹೋರಾಟ ಸಮಿತಿಯಿಂದ ಹಮ್ಮಿಕೊಂಡ ಪ್ರತಿಭಟನೆ ಡಿಸಿಎಂ ಭೇಟಿ ಮಾಡಿಸುವ ಡಿಸಿ ಭರವಸೆಯ ಮಾತಿನಂತೆ ಶುಕ್ರವಾರ ವಾಪಸ್ ಪಡೆಯಲಾಯಿತು.

ವಿವಿಧ ಬೇಡಿಕೆಯೊಂದಿಗೆ ಮಾ.೫ರಂದು ನೂರಾರು ಎತ್ತಿನ ಬಂಡಿ, ಟ್ರಾÈಕ್ಟರ್‌ಗಳೊಂದಿಗೆ ಬೃಹತ್ ಪ್ರತಿಭಟನೆ ಮೂಲಕ ಡಿಸಿ ಕಚೇರಿಗೆ ಆಗಮಿಸಿ, ಮುಖ್ಯ ರಸ್ತೆಯಲ್ಲಿಯೇ ಅಡುಗೆ ಮಾಡಿ, ಎತ್ತುಗಳನ್ನು ಕಟ್ಟಿ, ಮೇವು, ನೀರು ಮಾಡಿದ ರೈತರನ್ನು ಶುಕ್ರವಾರ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಭೇಟಿ ನೀಡಿ, ಮನವೊಲಿಸಿದರು.

ಈ ವೇಳೆ ಮಾತನಾಡಿದ ರೈತ ಮುಖಂಡರು, ಮೂರು ದಿನ ರಸ್ತೆಯಲ್ಲಿ ಕುಳಿತ್ತಿz್ದೆÃವೆ. ಅಧಿಕಾರಿಗಳು ಕನಿಷ್ಠ ಸಮಸ್ಯೆ ಕೇಳುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಕನಿಷ್ಠ ರೈತರೊಂದಿಗೆ ಫೋನ್‌ನಲ್ಲೂ ಮಾತನಾಡಿ, ಮನವರಿಕೆ ಮಾಡದೇ ದರ್ಪ ಮೆರೆದಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ರೈತ ಹೋರಾಟ ಸಮಿತಿಯ ಪ್ರಮುಖ ಅವ್ವಣ್ಣ ಮ್ಯಾಕೇರಿ ಮಾತನಾಡಿ, ಜಿಲ್ಲೆಯಲ್ಲಿ ೧.೮೨ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬೆಳೆ ಯಾವುದೋ ರೋಗ ಬಂದು ಹಾಳಾಗಿದೆ. ಕಳಪೆ ಬೀಜ, ತೇವಾಂಶ ಕೊರತೆಯಿಂದ ಹಾನಿ ಎಂದು ಕೃಷಿ ಇಲಾಖೆ ವರಿ ಸಲ್ಲಿಸಿದೆ. ಅದರಂತೆ ಬೆಳೆ ಹಾನಿಗೆ ಎಕರೆಗೆ ೨೫ ಸಾವಿರ ರೂ. ನೀಡಬೇಕು, ಬೆಂಬಲ ಬೆಲೆ ಹೆಚ್ಚಳಕ್ಕೆ ಅಧಿಕಾರಿಗಳು ಶ್ರಮಿಸಬೇಕು, ನೆಟೆ ರೋಗ ಬರದಂತೆ ಮುಂಜಾಗ್ರತೆ ವಹಿಸಬೇಕು, ಬೆಳೆ ವಿಮೆಯಲ್ಲಿ ತಾರತಮ್ಯವಾಗುತ್ತಿದ್ದು, ಪುನಃ ಮಾಪನ ಮಾಡಿ ನ್ಯಾಯ ಒದಗಿಸಬೇಕು ಎಂದು ಹೇಳಿದರು.

ತೊಗರಿ ಬೆಳೆಗಾರರ ಸಂಘದ ಅಧ್ಯಕ್ಷ ಬಸವರಾಜ ಇಂಗಿನ್, ಕೃಷಿಕ ಸಮಾಜದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ಪಾಟೀಲ್, ರೈತ ಮುಖಂಡ ದಯಾನಂದ ಪಾಟೀಲ್, ಬಿಜೆಪಿ ಮಹಾನಗರ ಜಿಲ್ಲಾಧ್ಯಕ್ಷ ಚಂದು ಪಾಟೀಲ್, ಚಂದ್ರಶೇಖರ ಹಿರೇಮಠ, ಮುಖಂಡ ಸುರೇಶ ಸಜ್ಜನ್, ಬಿ.ರೇಣುಕಾಚಾರ್ಯ ಸೇರಿ ಹಲವು ಮುಖಂಡರು ಮಾತನಾಡಿ, ರೈತರ ಸಮಸ್ಯೆಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ಸರ್ಕಾರಕ್ಕೆ ಬೆಳೆ ಹಾನಿ ಕುರಿತು ವರದಿ ಸಲ್ಲಿಸಲಾಗಿದೆ. ಹೆಚ್ಚುವರಿ ಮಾಹಿತಿ ಕೇಳಿದ್ದು, ವರದಿ ಕಳುಹಿಸಲಾಗುತ್ತಿದೆ. ಮಾ.೮ರಂದು ಜಿಲ್ಲೆಗೆ ಬರಲಿರುವ ಡಿಸಿಎಂ ಜತೆಗೆ ರೈತರ ನಿಯೋಗದೊಂದಿಗೆ ತೆರಳಿ ಮನವರಿಕೆ ಮಾಡೋಣ. ಪರಿಹಾರ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು. ಅವರ ಭರವಸೆಯಂತೆ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಈ ವೇಳೆ ಕೆಲ ರೈತರಿಂದ ಅಪಸ್ವರ ಕೇಳಿ ಬಂತು.

ಪ್ರಮುಖರಾದ ಆದಿನಾಥ ಹೀರಾ, ಮಲ್ಲಣ್ಣ ಕೋಳಕೂರ, ಹಣಮಂತರಾವ ಹೂಗಾರ, ಗಿರೀಶ ಇನಾಂದಾರ, ಶಿವುಗೌಡ, ಶಶಿಧರ ಸೂಗೂರ, ಮಲ್ಲಣ್ಣ ಕುಲ್ಕರ್ಣಿ, ಶಿವರಾಜ ಸಂಗೋಳಗಿ, ಅಲ್ಲಮಪ್ರಭು ಗುಡ್ಡಾ, ಪ್ರೇಮ ಕೋಲಿ, ಡಾ.ಸುಧಾ ಹಾಲಕಾಯಿ, ಬಿ.ರೇಣುಕಾಚಾರ್ಯ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net