

ಚಿತ್ರದುರ್ಗ
ಬೆಂಗಳೂರಲ್ಲಿ ಡಿ.13ರಿಂದ 17ರವರೆಗೆ ಹಾಗೂ ದೇಶದ ಇತರೆ ನಡೆಯಲಿರುವ ಜಿ.20 ರಾಷ್ಟ್ರಗಳ ಶೃಂಗಸಭೆ ವಿರೋಧಿಸಿ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಹಸಿರು ಕಪ್ಪು ಪಟ್ಟಿ ಧರಿಸಿ ಡಿಸಿ ಕಚೇರಿ ಪ್ರತಿಭಟಿಸಿದರು.
ಬೆಂಗಳೂರಿನ ದೇವನಹಳ್ಳಿಯ ಲ್ಲಿ ಈ ಸಭೆ ಏರ್ಪಡಿಸಿರುವುದು ಕನ್ನಡಿಗರ ದೌರ್ಭಾಗ್ಯದ ಸಂಗತಿಯಾಗಿದೆ. ಅಂಬಾನಿ,ಆದಾನಿ ಮತ್ತಿತರ ಬಂಡವಾಳ ಶಾಹಿಗಳನ್ನು ಆರ್ಥಿಕವಾಗಿ ಬಲಪಡಿಸುವ ಹಾಗೂ ದೇಶವನ್ನು ದಿವಾಳಿಗೆ ನೂಕುವ ಹುನ್ನಾರುಗಳ ಭಾಗವಾಗಿ ಈ ಶೃಂಗಸಭೆಗಳೆಂದು ಆರೋಪಿಸಿದರು. ದೇಶದ ವೈವಿಧ್ಯತೆ,ಅನೇಕತೆಯಲ್ಲಿನ ಏಕತೆಗೆ ಈ ಸಭೆಗಳು ಧಕ್ಕೆ ತರುತ್ತವೆ.
ಆದ್ದರಿಂದ ದೇಶದಲ್ಲಿ ನಡೆಯಲಿರುವ ಈ ಎಲ್ಲ ಸಭೆಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ರಾಜ್ಯರೈತ ಸಂಘದ ಕಾರ‌್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ,ಜಿಲ್ಲಾಧ್ಯಕ್ಷ ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ,ಪ್ರಧಾನ ಕಾರ‌್ಯದರ್ಶಿ ಜಿ. ರಾಮರೆಡ್ಡಿ,ರಾಜಶೇಖರಪ್ಪ,ರಾಮಚಂದ್ರಪ್ಪ,ಮಂಜುನಾಥ್,ಲೋಕೇಶಪ್ಪ,ಸದಾಶಿವಪ್ಪ, ಸೇರಿದಂತೆ ಇತರರು ಭಾಗವಹಿಸಿದ್ದರು.