

ಬೋರಗಾಂವ: ವಿಕಾಸರತ್ನ ವಿವಿಧೋದ್ದೇಶ ಪಿಕೆಪಿಎಸ್ ಸಂಘಕ್ಕೆ ಬೆಳಗಾವಿ ಜಿಲ್ಲಾ ಬ್ಯಾಂಕ್‌ನಿಂದ 3.33 ಕೋಟಿ ರೂ. ಸಾಲ ಮಂಜೂರು ಆಗಿದೆ. ಸದಸ್ಯರ ಹಾಗೂ ರೈತರ ಆರ್ಥಿಕ ಅಭಿವೃದ್ಧಿಗೆ ಸಂಘ ಶ್ರಮಿಸುತ್ತಿದೆ ಎಂದು ಸಂಘದ ಅಧ್ಯಕ್ಷ ರಾಜು ಖಿಚಡೆ ಹೇಳಿದರು.
ಸಮೀಪದ ಕಾರದಗಾ ಗ್ರಾಮದ ವಿಕಾಸರತ್ನ ವಿವಿಧೋದ್ದೇಶ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 13ನೇ ವಾರ್ಷಿಕ ಮಹಾಸಭೆ ಹಾಗೂ ಮಹಾಲಕ್ಷ್ಮೀ ವಿವಿಧ ಉದ್ಧೇಶಗಳ ಸಂಘದ 2ನೇ ವಾರ್ಷಿಕ ಸಭೆಯಲ್ಲಿ ಮಾತನಾಡಿದರು.
ಸಂಘದ ಸಿಇಒ ನಿಜಗುಣಿ ತಿಗಡ ಮಾತನಾಡಿ, ಸಂಘವು 484 ಸದಸ್ಯರನ್ನು ಒಳಗೊಂಡಿದ್ದು, 27.29 ಲಕ್ಷ ರೂ. ಹೂಡಿಕೆ, 16.63 ಲಕ್ಷ ರೂ. ಠೇವಣಿ ಹೊಂದಿದೆ. ಅ ವರ್ಗದ ಸದಸ್ಯರಿಗೆ 3.33 ಕೋಟಿ ರೂ. ಸಾಲ ಹಾಗೂ ಬ ವರ್ಗದ ಸದಸ್ಯರಿಗೆ 69.65 ಲಕ್ಷ ರೂ. ವಿತರಿಸಿದ್ದು, ಸಂಘ 4.10 ಲಕ್ಷ ರೂ. ಲಾಭ ಗಳಿಸಿದೆ ಎಂದು ಹೇಳಿದರು. ಬಾಳಾಸಾಹೇಬ ನಾಡಗೆ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಪದ್ಮಾವತಿ ಅಲಂಕಾರ, ಉಪಾಧ್ಯಕ್ಷ ಕಿರಣ ಟಾಕಳೆ, ಸದಸ್ಯರಾದ ಮಂಗಲ ಡಾಂಗೆ, ನಿಶಾ ಖಿಚಡೆ, ಅರ್ಜುನ ಕುಂಬಾರ, ರಾಜು ಕುರಾಡೆ, ಸುಭಾಷ ಠಾಕಣೆ, ಸಂಜಯ ಗಾವಡೆ, ನಿರ್ದೇಶಕ ಧನಪಾಲ ಸದಲಗೆ, ಶೀತಲ ವನವಾಡೆ, ಶೌಕತ್ ಕಲಾವಂತ, ಸಚಿನ ಜಾಧವ, ವಿಜಯ ಕಚರೆ, ಮಹಾದೇವ ಡಾಂಗೆ, ಜ್ಯೋತಿ ಅಲಂಕಾರ, ಮಲ್ಲಪ್ಪ ಬಾಗಾಜೆ, ಸಂತೋಷ ಬುಡ್ಕೆ ಇತರರಿದ್ದರು.