ರೈತರ ಪ್ರಗತಿಗೆ ಸಹಕಾರ ಅಗತ್ಯ

23 Sambargi 01-Web
Published on

ಸಂಬರಗಿ: ಕಾಗವಾಡ ವಿಧಾನಸಭಾ ಮತಕ್ಷೇತ್ರದಲ್ಲಿ ರೈತರ ಬೆನ್ನೆಲುಬಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ ಎಲ್ಲರ ಸಹಕಾರ ಅತ್ಯವಶ್ಯವಿದೆ ಎಂದು ಜವಳಿ ಹಾಗೂ ಅಲ್ಪ ಸಂಖ್ಯಾತರ ಇಲಾಖೆ ಸಚಿವ ಶ್ರೀಮಂತ ಪಾಟೀಲ ಹೇಳಿದರು. ಅಥಣಿ ಶುಗರ್ಸ್‌ ಕೆಂಪವಾಡ ಆವರಣದಲ್ಲಿ ಅಥಣಿ ಹಾಗೂ ರಾಯಬಾಗ ತಾಲೂಕಿನ ರೈತರ ವತಿಯಿಂದ ಆಯೋಜಿಸಿದ್ದ ಸತ್ಕಾರ ಸ್ವೀಕರಿಸಿ ಮಾತನಾಡಿದರು. ಸರ್ಕಾರದ ಪ್ರತಿಯೊಂದು ಯೋಜನೆ ಸಾಮಾನ್ಯ ಜನರಿಗೆ ತಲುಪಿಸುವ ಗುರಿ ಇದೆ. ರೈತರ ಸಮಸ್ಯೆ ಪರಿಹರಿಸಲು ಸಿದ್ಧವಾಗಿದ್ದೇನೆ. ಚುನಾವಣೆ ಆದ ನಂತರ ಪಕ್ಷಾತೀತವಾಗಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೊಳ್ಳಲಾಗಿದೆ ಎಂದರು. ಬಸ್ತವಾಡ ಗ್ರಾಮದ ಮಹಾದೇವ ವಡಗಾವೆ, ಸಿದ್ದರಾಯ ಚೌಗಲಾ, ರಾಜು ಚವ್ಹಾಣ, ಆರ್.ಎಂ. ಪಾಟೀಲ, ಈಶ್ವರ ಕುಂಬಾರೆ, ಶಿವಾಜಿ ಗಾಡಿವಡ್ಡರ, ರಾಜು ಮಾನೆ, ಬಿ.ಎ. ಜಗತಾಪ ಇತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net