ರೈತರ ಪ್ರಗತಿಗಾಗಿ ಬ್ರಿಡ್ಜ್ ಕಂ ಬಾಂದಾರ ನಿರ್ಮಾಣ

21KOKATANUR2-Web
ಖೋತನಹಟ್ಟಿ ಗ್ರಾಮದಲ್ಲಿ ಬ್ರಿಡ್ಜ್ ಕಂ ಬಾಂದಾರ ನಿರ್ಮಾಣ ಕಾಮಗಾರಿಗೆ ಶಾಸಕ ಮಹೇಶ ಕುಮಠಳ್ಳಿ ಚಾಲನೆ ನೀಡಿದರು. ಜಿಪಂ ಸದಸ್ಯ ಎಸ್.ಎ. ಮುದಕಣ್ಣವರ, ಶ್ರೀಕಾಂತ ಪವಾರ, ಅಮೂಲ ನಾಯಿಕ, ಸಿದ್ರಾಮ ಕಳಸಣ್ಣವರ ಇದ್ದರು.
Published on

ಕೊಕಟನೂರ: ಗ್ರಾಮೀಣ ಭಾಗದಲ್ಲಿ ಬಾಂದಾರ ನಿರ್ಮಾಣಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೆಚ್ಚಿನ ಪ್ರಮಾಣದ ಅನುದಾನ ಬಿಡುಗಡೆ ಮಾಡುತ್ತಿದ್ದಾರೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಬೇಕು. ರೈತರು ಇವುಗಳ ಸದುಪಯೋಗ ಪಡೆದು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು ಎಂದು ಶಾಸಕ ಮಹೇಶ ಕುಮಠಳ್ಳಿ ಹೇಳಿದ್ದಾರೆ.

ತಾಲೂಕಿನ ದೇಸಾರಟ್ಟಿ, ಖೋತನಟ್ಟಿ, ತಂಗಂಡಿ, ಮಸರಗುಪ್ಪಿ ಗ್ರಾಮದ ಹಿರೇಹಳ್ಳಕ್ಕೆ ಬ್ರಿಡ್ಜ್ ಕಂ ಬಾಂದಾರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ದೇಸಾರಟ್ಟಿಗೆ 1 ಕೋಟಿ ರೂ., ತಂಗಡಿ 1.3 ಕೋಟಿ ರೂ. , ಮರಗುಪ್ಪಿ 2 ಕೋಟಿ ರೂ. ಹಾಗೂ ಖೋತನಟ್ಟಿ ಗ್ರಾಮದ ಹಿರೇಹಳ್ಳಕ್ಕೆ 1.3 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಆರಂಭ ಮಾಡಲಾಗಿದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವವಾಗದಂತೆ ಈಗಾಗಲೇ ಸಂಬಂಧಪಟ್ಟವರಿಗೆ ವ್ಯವಸ್ಥೆ ಮಾಡಲು ಸೂಚಿಸಲಾಗಿದೆ ಎಂದರು. ಜಿಪಂ ಸದಸ್ಯ ಎಸ್.ಎ. ಮುದಕಣ್ಣವರ, ನ್ಯಾಯವಾದಿ ಬಿ.ಎ. ಚೌವ್ಹಾಣ, ಶ್ರೀಕಾಂತ ಪವಾರ, ಅಮೂಲ ನಾಯಿಕ, ಸಿದ್ರಾಮ ಕಳಸಣ್ಣವರ, ನಿಂಗಪ್ಪ ನಂದೇಶ್ವರ, ತಾಪಂ ಸದಸ್ಯ ಜಯವಂತರಾವ್ ದೇಸಾಯಿ, ಸಣ್ಣ ನೀರಾವರಿ ಇಲಾಖೆ ಎಇಇ ಎಸ್.ಎಸ್. ಮಾಕಾಣಿ, ಎಇ ವಿಜಯ ವಸ್ತ್ರದ, ಸದಾಶಿವ ಸವದಿ, ರಾಜು ಕಾಂಬಳೆ, ದೀಪಕ ಸೂರ್ಯವಂಶಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net