

ದೊಡ್ಡಬಳ್ಳಾಪುರ: ತಾಲೂಕಿನ ಎಸ್.ಎಂ.ಗೊಲ್ಲಹಳ್ಳಿ ಸಮೀಪದ ಬಯಲು ಬಸವಣ್ಣ ದೇವಾಲಯದಲ್ಲಿ ಶ್ರಾವಣ ಮಾಸದ ಪ್ರಯುಕ್ತ ವಿಶೇಷ ಪೂಜೆ ಹಾಗೂ ಹೂವಿನ ಆರತಿ ನೆರವೇರಿತು.
ಉತ್ಸವದಲ್ಲಿ ಅರಳುಮಲ್ಲಿಗೆ, ಏಕಾಶಿಪುರ, ಕುಂಟನಹಳ್ಳಿ, ಗೆಜ್ಜಗದಹಳ್ಳಿ, ಬೈರಸಂದ್ರ ಸೇರಿ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಭಕ್ತರು ಭಾಗವಹಿಸಿದ್ದರು. ಸೋಮವಾರ ಒಂದು ದಿನ ಮಾತ್ರ ಇಲ್ಲಿ ಪೂಜೆ ನಡೆಯುತ್ತವೆ. ಇದೇ ವೇಳೆ ಉತ್ತಮ ಮಳೆ-ಬೆಳೆಗಾಗಿ ರೈತರು ಪ್ರಾರ್ಥನೆ ಸಲ್ಲಿಸಿದರು.