ಮೋದಿ ಸರ್ಕಾರದಿಂದ ರೈತರ ಕಡೆಗಣನೆ: ಶಾಸಕ ಬಿ.ಕೆ.ಸಂಗಮೇಶ್ವರ್

28bdvt2
ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ, ಧ್ವಜಾರೋಹಣ ಮತ್ತು ಪ್ರತಿಜ್ಞಾ ಸ್ವೀಕಾರ ಸಮಾರಂಭದಲ್ಲಿ ಶಾಸಕ ಬಿ.ಕೆ.ಸಂಗಮೇಶ್ವರ್ ಮಾತನಾಡಿದರು. ಬಲ್ಕಿಶ್ ಬಾನು, ಕುಮಾರ್, ಸುಕನ್ಯಾ, ಸಾದಿಕ್, ಗಂಗಾಧರ್, ಅಂತೋಣಿ ವಿಲ್ಸನ್ ಇತರರಿದ್ದರು.
Published on

ಭದ್ರಾವತಿ: ನರೇಂದ್ರ ಮೋದಿ ಸರ್ಕಾರ ಉದ್ಯಮಿಗಳ ಪರವಾಗಿದೆಯೇ ಹೊರತು ರೈತರ ಪರವಾಗಿಲ್ಲ ಎಂದು ಶಾಸಕ ಬಿ.ಕೆ,.ಸಂಗಮೇಶ್ವರ್ ಹೇಳಿದರು. ನಗರದ ಶಾಸಕರ ಗೃಹ ಕಚೇರಿ ಆವರಣದಲ್ಲಿ ಗುರುವಾರ ನಗರ ಹಾಗೂ ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್‌ನಿAದ ಆಯೋಜಿಸಿದ್ದ ಕಾಂಗ್ರೆಸ್ ಸಂಸ್ಥಾಪನಾ ದಿನಾಚರಣೆ, ಧ್ವಜಾರೋಹಣ ಮತ್ತು ಪ್ರತಿಜ್ಞಾ ಸ್ವೀಕಾರ ಸಮಾರಂಭದಲ್ಲಿ ಮಾತನಾಡಿದರು. ಜೆಡಿಎಸ್‌ನ ಎಚ್.ಡಿ.ದೇವೇಗೌಡ ಪ್ರಧಾನಿ ಆಗುವಲ್ಲಿ ಮತ್ತು ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವಲ್ಲಿ ಕಾಂಗ್ರೆಸ್ ಪಕ್ಷದ ಸಹಕಾರವಿದೆ. ಆದರೆ ಅದನ್ನು ಮರೆತು ಇದಿಗ ಜೆಡಿಎಸ್ ಬಿಜೆಪಿಯ ಬಿ.ಟೀಮ್ ನಂತೆ ಕಾರ್ಯನಿರ್ವಹಿಸುತ್ತಿದೆ. ಬಿಜೆಪಿ ಅಭಿವೃದ್ಧಿಯ ಮೂಲಕ ಹಿಂದುಗಳ ಮನ ಗೆಲ್ಲಲಿ. ಹಿಂದುತ್ವದ ಹೆಸರಿನಲ್ಲಿ ಸಂಘರ್ಷಕ್ಕೆ ಅವಕಾಶಕೊಟ್ಟು ರಾಜಕಾರಣ ಮಾಡುವುದು ಸರಿಯಲ್ಲ ಎಂದರು. ಪಕ್ಷದ ಮುಖಂಡರಾದ ಬಲ್ಕಿಶ್‌ಬಾನು ಮಾತನಾಡಿ, ದೇಶ ಸಂಕಷ್ಟದಲ್ಲಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಕಿತ್ತೊಗೆದಂತೆ ರಾಷ್ಟçದಲ್ಲಿಯೂ ಕಿತ್ತೊಗೆಯಲು ಕಾರ್ಯಕರ್ತರು ಪಣತೊಡಬೇಕು ಎಂದು ಕರೆ ನೀಡಿದರು. ಮುಖಂಡರಾದ ಎಸ್.ಕುಮಾರ್, ಸುಕನ್ಯಾ, ಸಿ.ಎಂ.ಸಾದಿಕ್, ಗಂಗಾಧರ್, ಚನ್ನಪ್ಪ, ರವಿಕುಮಾರ್, ಅಂತೋಣಿ ವಿಲ್ಸನ್, ಗೋಪಿ ಹಲವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net