

ನಂದಗುಡಿ: ನಂದಗುಡಿ ಭಾಗದ ರೈತರ ಜಮೀನನ್ನು ಟೌನ್ಶಿಪ್ಗೆ ಹೋಗದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ಈ ಜವಾಬ್ದಾರಿ ನಾನು ತೆಗೆದುಕೊಳ್ಳದಿದ್ದರೆ ಮಾಗಡಿ ರೀತಿ ನಂದಗುಡಿ ಜಾಗಕ್ಕೆ ಕೂಡ ಅಧಿಸೂಚನೆ ಆಗುತ್ತಿತ್ತು. ನನಗೆ ಸಿಎಂ, ಡಿಸಿಎಂ ಸಹಕಾರದ ಜತೆಗೆ ನಿಮ್ಮ ಹೋರಾಟದಿಂದ ಭೂಮಿ ಉಳಿಯಲು ಸಾಧ್ಯವಾಗಿದೆ. ನಂದಗುಡಿ ಟೌನ್ಶಿಪ್ ವಿಚಾರವಾಗಿ ರೈತರಿಗೆ ಯಾವುದೇ ಆತಂಕ ಬೇಡ ಎಂದು ಶಾಸಕ ಶರತ್ ಬಚ್ಚೇಗೌಡ ತಿಳಿಸಿದರು.
ಹೊಸಕೋಟೆ ತಾಲೂಕಿನ ಇಟ್ಟಸಂದ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ರೈತರ ಅಭಿವೃದ್ಧಿ ದೃಷ್ಟಿಯಿಂದ ಹಲವು ಆಯಾಮಗಳಲ್ಲಿ ಕೆಲಸ ಮಾಡುತ್ತಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇಸ್ರೇಲ್ ಮಾದರಿ ಕೃಷಿಗೆ ಪೂರಕವಾಗುವ ಕೃಷಿ ಸೌಲಭ್ಯ ಒದಗಿಸುವುದು ಉತ್ತಮ ಎಂದರು. ಹೊಸಕೋಟೆಯಲ್ಲಿ ನೀರಾವರಿಗೆ ಯಾವುದೇ ರೀತಿಯ ಜಲಮೂಲಗಳಿಲ್ಲ. ಇದರ ನಡುವೆ ತಾಲೂಕಿಗೆ ವರ್ಷಕ್ಕೆ 2.4 ಟಿಎಂಸಿ ಮಳೆಯಾಗುತ್ತೆ. ಇದರಲ್ಲಿ 1.7 ಟಿಎಂಸಿ ನೀರನ್ನು ಭೂಮಿ ಹೀರಿಕೊಳ್ಳುತ್ತದೆ. ಆದರೆ ನಾವು ವರ್ಷಕ್ಕೆ ಬೋರ್ವೆಲ್ ಮೂಲಕ 3 ಟಿಎಂಸಿ ನೀರನ್ನು ತೆಗೆದು ಬಳಕೆ ಮಾಡುತ್ತಿದ್ದೇವೆ. ಇದೀಗ 1.5 ಸಾವಿರ ಅಡಿ ಬೋರ್ವೆಲ್ ಕೊರೆಯುವ ಸನ್ನಿವೇಶ ಎದುರಾಗಿದೆ. ಇದರ ನಡುವೆ ಗ್ರಾಮಾಭಿವೃದ್ಧಿ ಕೆರೆ ಹೂಳೆತ್ತುವ ಮೂಲಕ ಅಂತರ್ಜಲ ವೃದ್ಧಿಸುತ್ತಿದೆ. ತಾಲೂಕಿನಲ್ಲಿ ಕಡಿಮೆ ನೀರನ್ನು ಬಳಸಿಕೊಂಡು ಇಸ್ರೇಲ್ ಮಾದರಿಯಲ್ಲಿ ಕೃಷಿ ಮಾಡುವ ರೈತರು ಹೆಚ್ಚಾಗಿದ್ದು, ಅದಕ್ಕೆ ಪೂರಕವಾಗುವ ಸಲಕರಣೆ, ತರಬೇತಿ ಒದಗಿಸಬೇಕು ಎಂದರು.
ಕೆಪಿಸಿಸಿ ಕಾರ್ಯದರ್ಶಿ ಇಟ್ಟಸಂದ್ರ ಬಿ.ಗೋಪಾಲ್ ಮಾತನಾಡಿ, ಗ್ರಾಮಾಭಿವೃದ್ಧಿ ಯೋಜನೆಯು ಸರ್ಕಾರಕ್ಕೆ ಪರ್ಯಾಯವಾಗಿ ಅಭಿವೃದ್ಧಿಗೆ ಪೂರಕವಾಗುವ ಕೆಲಸ ಮಾಡುತ್ತಿದೆ ಎಂದರು. ಉಪತಹಸೀಲ್ದಾರ್ ಮಂಜುನಾಥ್, ಹಿರಿಯ ಮುಖಂಡ ಐ.ಸಿ.ಮುನಿಶಾಮಗೌಡ, ಕೆರೆ ಸಮಿತಿ ಅಧ್ಯಕ್ಷ ರಮೇಶ್, ಎಸ್ಎಫ್ಸಿಎಸ್ ನಿರ್ದೇಶಕ ಧಮೇರ್ಶ್, ಚಂದ್ರಪ್ಪ, ಮಾಜಿ ಅಧ್ಯೆ ಬಿಂದೂ, ರಾಮಾಂಜಿನಪ್ಪ, ಪಿಡಿಒ ಪುಷ್ಪಲತಾ, ಸದಸ್ಯರಾದ ಜಯರಾಮಯ್ಯ, ಅಸ್ಮಾತಾಜ್ ಜಿಯಾವುಲ್ಲಾ, ವೃತ್ತ ನಿರೀಕ್ಷಕ ಲೋಕನಾಥ್, ಗ್ರಾಮಲೆಕ್ಕಿಗ ತೇಜಸ್, ಎಸ್ಕೆಡಿಆರ್ಪಿ ತಾಲೂಕು ಯೋಜನಾಧಿಕಾರಿ ಹರೀಶ್ ಇತರರು ಇದ್ದರು.
ರಾಜ್ಯದಲ್ಲಿ ಹಲವು ಮೈಕ್ರೋ ಫೈನಾನ್ಸ್ ಗಳು ಅನೇಕ ಆವಾಂತರ ಸೃಷ್ಟಿಸಿದ್ದು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಾಕಷ್ಟು ಅಚ್ಚುಕಟ್ಟಾಗಿ ಸಂಗಳ ಮೂಲಕ ಸಾಲ ಕೊಟ್ಟು, ವಾಪಸ್ ಪಡೆದುಕೊಡುವ ಕಾರ್ಯ ಗೊಂದಲವಿಲ್ಲದೆ ಮಾಡುತ್ತಿದೆ. | ಉಮರಬ್ಬ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ