ರೈತರಿಗೆ ಸರ್ಕಾರದ ಆಸರೆ ಅಗತ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಭಿಮತ

21-vij-5a-d.k.shivakumar beti
Published on

ವಿಜಯಪುರ: ದ್ರಾಕ್ಷಿ ಕಣಜವಾಗಿರುವ ದೇವನಹಳ್ಳಿ ತಾಲೂಕಿನಲ್ಲಿ ದ್ರಾಕ್ಷಿ ಬೆಳೆ ಕೇಳುವವರೆ ಇಲ್ಲದೆ ರೈತರು ಕೋಟ್ಯಂತರ ರೂ., ಬೆಳೆ ಹಾನಿಗೆ ಒಳಗಾಗಿದ್ದು, ಕೂಡಲೇ ಸರ್ಕಾರ ಎಚ್ಚೆತ್ತುಕೊಂಡು ರೈತರ ಸಹಾಯಕ್ಕೆ ಮುಂದಾಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.

ಹೋಬಳಿಯ ಹಾರೋಹಳ್ಳಿ ಗ್ರಾಮದಲ್ಲಿ ಕಟಾವಾಗದೇ ತೋಟಗಳಲ್ಲಿಯೇ ಉಳಿದ ಸಾವಿರಾರು ಟನ್ ದ್ರಾಕ್ಷಿ ಬೆಳೆ ಪರಿಶೀಲಿಸಿ ಹಾಗೂ ಬಡ ಕೂಲಿಕಾರ್ಮಿಕರಿಗೆ ಕಾಂಗ್ರೆಸ್‌ನಿಂದ ಆಹಾರದ ಕಿಟ್‌ಗಳನ್ನು ವಿತರಿಸಿ ಮಾತನಾಡಿದರು.

ಮಾಜಿ ಸಚಿವ ಕೃಷ್ಣಭೈರೆಗೌಡ ಮಾತನಾಡಿ, ದ್ರಾಕ್ಷಿ ಬೆಳೆ ಇತರೆ ಬೆಳೆಗಳಂತೆ ರಕ್ಷಿಸಿಟ್ಟುಕೊಳ್ಳಲು ಸಾಧ್ಯವಾಗದ ತಾಜಾ ಬೆಳೆ ಆಗಿದ್ದು, ವಾರ್ಷಿಕ 10,000 ಟನ್‌ಗೂ ಹೆಚ್ಚು ಬೆಳೆ ಬೆಳೆಯುವ ರೈತರಿಗೆ ಸರ್ಕಾರ ಶಾಶ್ವತ ಪರಿಹಾರ ರೂಪಿಸಬೇಕೆಂದು ತಿಳಿಸಿದರು.

ದೇಶದಲ್ಲೆಡೆ ಬಾದಿಸುತ್ತಿರುವ ಕರೊನಾದಿಂದ ರೈತರು ಕಾರ್ಮಿಕರು ಹೆಚ್ಚು ತೊಂದರೆಗೆ ಒಳಗಾಗಿದ್ದು ಉಳ್ಳವರು ಪ್ರತಿಯೊಬ್ಬರು ಕೈಲಾದ ಸಹಾಯ ಮಾಡಬೇಕು ಎಂದರು.

ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ, ಮಾಜಿ ಶಾಸಕ ಎಂ.ಮುನಿನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯರಾದ ಲಕ್ಷ್ಮೀನಾರಾಯಣಪ್ಪ, ಟಿ.ಎನ್.ಅನಂತಕುಮಾರಿ ಚಿನ್ನಪ್ಪ, ತಾಪಂ ಅಧ್ಯಕ್ಷೆ ಚೈತ್ರಾ ವೀರೇಗೌಡ, ಎಪಿಎಂಸಿ ಉಪಾಧ್ಯಕ್ಷ ಸುಧಾಕರ್, ದೇವನಹಳ್ಳಿ ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಆರ್.ಸಿ.ಪ್ರಸನ್‌ಕುಮಾರ್, ಹಾರೋಹಳ್ಳಿ ಗ್ರಾಪಂ ಮಾಜಿ ಅಧ್ಯಕ್ಷ ಚಂದ್ರಪ್ಪ, ಮುಖಂಡ ವಸಂತ್ ಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net