ಸಕ್ಕರೆ ಕಾರ್ಖಾನೆಗಳ ವಿರುದ್ಧ ಆಕ್ರೋಶ

dc office (1)
Published on

ಕಲಬುರಗಿ: ಅಫಜಲಪುರ ತಾಲೂಕಿನಲ್ಲಿರುವ ಸಕ್ಕರೆ ಕಾರ್ಖಾನೆಗಳು ತಮಗೆ ಬೇಕಾದ ಹಾಗೆ ಕಬ್ಬು ಖರೀದಿ ಮಾಡುತ್ತಿವೆ. ದೂರದ ಮಹಾರಾಷ್ಟç, ವಿಜಯಪುರದಿಂದ ಕಬ್ಬು ತರುತ್ತಿದ್ದಾರೆ. ಆದರೆ ಪಕ್ಕದ ರೈತರ ಕಬ್ಬು ಖರೀದಿ ಮಾಡಲ್ಲ. ಈ ವರ್ಷ ಕಬ್ಬು ಕಡಿಮೆ ಇದೆ ನಮ್ಮ ಬಳಿ ಬರುತ್ತಿದ್ದಾರೆ. ನಮ್ಮ ಮನಸ್ಸಿಗೆ ಬಂದಲ್ಲಿ ಹಾಕುತ್ತೇವೆ. ಇವರು ಕೇಳುವಂತಿಲ್ಲ ಎಂದು ಕಬ್ಬು ಬೆಳೆಗಾರರು ಕಾರ್ಖಾನೆಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾಡಳಿತ ಹಾಗೂ ರೈತರ ಸಭೆಯಲ್ಲಿ ಮಾತನಾಡಿದ ರೈತರು, ನಮಗೇ ಕಬ್ಬು ಕೊಡಬೇಕು ಎಂದು ಕಾರ್ಖಾನೆಯವರು ನ್ಯಾಯಾಲಯಕ್ಕೆ ಹೋಗಿದ್ದು ಸರಿಯಲ್ಲ. ಕಾರ್ಖಾನೆಯವರಿಗೆ ಕಾರ್ಯಕ್ಷೇತ್ರ ಈಗ ನೆನಪಾಗಿದೆ. ಹಿಂದಿನ ವರ್ಷ ಎಲ್ಲಿ ಹೋಗಿತ್ತು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ರೈತರ ನೆರವಿಗೆ ಬರಬೇಕು. ಕಂಪನಿಗಳು ರೈತರ ಮೇಲೆ ದಬ್ಬಾಳಿಕೆ ಮಾಡುವಂತಾಗಬಾರದು ಎಂದು ತಿಳಿಸಿದರು.

ತೊಗರಿ ಲಾತೂರಿಗೆ ಕೊಡುತ್ತೇವೆ, ಹತ್ತಿ ಜೇವರ್ಗಿಗೆ ಒಯ್ಯುತ್ತೇವೆ. ಹಾಗೆ ಕಬ್ಬು ನಮಗೆ ಬೇಕಾದರೆ ಮುಂಬೈ, ಪುಣೆಗೆ ಒಯ್ಯುತ್ತೇವೆ. ಆದ್ದರಿಂದ ಕಾರ್ಖಾನೆಗೆ ನಿಗದಿಪಡಿಸಿದ ಕ್ಷೇತ್ರದ ವ್ಯಾಪ್ತಿಯ ರೈತರು ಅದೇ ಕಾರ್ಖಾನೆಗೆ ಕಬ್ಬು ಕೊಡಬೇಕು ಎಂಬ ನಿಯಮ ಬೇಡ. ನಮಗೆ ಎಲ್ಲಿ ಉತ್ತಮ ದರ ಸಿಗುತ್ತದೆಯೋ ಅಲ್ಲಿಗೆ ಕೊಡುತ್ತೇವೆ ಎಂದು ರೈತರು ಸ್ಪಷ್ಟಪಡಿಸಿದರು.

ಈ ವೇಳೆ ಮಾತನಾಡಿದ ರೇಣುಕಾ ಸುಗರ್ಸ್ ಕಂಪನಿ ಅಧಿಕಾರಿಗಳು, ದ್ವೀಪಕ್ಷಿಯ ಒಪ್ಪಂದಕ್ಕೆ ಕಂಪನಿ ಸಿದ್ಧವಿದೆ ಎಂದು ತಿಳಿಸಿದರು. ದ್ವೀಪಕ್ಷಿಯ ಒಪ್ಪಂದಕ್ಕೆ ನಾವು ಸಿದ್ಧರಿದ್ದು, ಕಡ್ಡಾಯವಾಗಿ ನಮ್ಮ ಕಬ್ಬು ಖರೀದಿ ಮಾಡಬೇಕು. ಎಫ್‌ಆರ್‌ಪಿಯಲ್ಲಿ ಸಾರಿಗೆ, ಕಟಾವು ಮಾಡುವುದಕ್ಕೆ ಹಣ ಕಟ್ ಮಾಡಿ ಹಣ ನೀಡಬೇಕು. ಬಾಕಿ ಉಳಿದ ಕಬ್ಬಿಗೆ ಪರಿಹಾರ ನೀಡಬೇಕು. ಆಗ ಒಪ್ಪುತ್ತೇವೆ ಎಂದರು.

ರೈತರಾದ ಶ್ರೀಮಂತ ಬಿರಾದಾರ, ರಮೇಶ ಹೂಗಾರ, ಕೆರಕನಹಳ್ಳಿಯ ಮಾಳಿಂಗರಾಯ ಬಿದನೂರ, ಶರಣಕುಮಾರ ಬಿಲ್ಲಾಡ, ಅಣ್ಣಾರಾವ ಪಾಟೀಲ್ ಸೇರಿದಂತೆ ರೈತರು, ಮುಖಂಡರು ತಮ್ಮ ಅಭಿಪ್ರಾಯ ತಿಳಿಸಿದರು.

ಕಾರ್ಯಕ್ಷೇತ್ರ ವ್ಯಾಪ್ತಿ ಕುರಿತು ಸಕ್ಕರೆ ಕಾರ್ಖಾನೆಯವರು ಕೋರ್ಟ್ಗೆ ಹೋದ ಹಿನ್ನೆಲೆಯಲ್ಲಿ ಸಭೆ ಏರ್ಪಡಿಸಲಾಗಿತ್ತು. ಜಿ¯್ಲÁಧಿಕಾರಿ ಫೌಜಿಯಾ ತರನ್ನುಮï ಅವರು ರೈತರ ಅಭಿಪ್ರಾಯವನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದು ಪ್ರಕಟಿಸಿದರು. ಅಪರ ಜಿ¯್ಲÁಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ಮಮತಾ ಕುಮಾರಿ, ಆಹಾರ, ನಾಗರೀಕ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆ ಉಪನಿರ್ದೇಶಕ ಶಾಂತಗೌಡ ಗುಣಕಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net