ಸಹಕಾರ ಸಂಘದಲ್ಲಿ ಪಡೆದಿದ್ದ ರೈತರ ಸಾಲ ಮನ್ನಾ

IMG_6966
Published on

ನುಗ್ಗೇಹಳ್ಳಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಲ್ಲಿ ರೈತರು ಪಡೆದಿದ್ದ 160 ಕೋಟಿ ರೂ. ಸಾಲ ಮನ್ನಾ ಆಗಿದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ಬಾಗೂರು ಹೋಬಳಿಯ ಬಿದರೆ, ಬಳಘಟ್ಟ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಇತ್ತೀಚೆಗೆ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಚನ್ನರಾಯಪಟ್ಟಣ ತಾಲೂಕಿನ 36,000 ರೈತರ ಸಾಲ ಮನ್ನಾಗಿದ್ದು, ಉಳಿದ 1, 800 ರೈತರ 10 ಕೋಟಿ ರೂ.ಸಾಲದ ಹಣವನ್ನು ಬಿಡುಗಡೆಗೆ ಸರ್ಕಾರಕ್ಕೆ ಮನವಿ ಮಾಡಿದ್ದೇನೆ ಎಂದರು.

ತೆಂಗು ಪುನಶ್ಚೇತನ ಪರಿಹಾರ ಹಣಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಪರಿಹಾರ ನೀಡಲಾಗಿದೆ. ಕಲ್ಲೆಸೋಮನಹಳ್ಳಿ ಏತ ನೀರಾವರಿ ಯೋಜನೆಗೆ ರೈತರು ತಮ್ಮ ಭೂಮಿ ಬಿಟ್ಟುಕೊಡುವ ಮೂಲಕ ಸಹಕರಿಸಬೇಕು ಎಂದರು.

ಎ.ಪಿ.ಎಂ.ಸಿ.ಮಾಜಿ ಅಧ್ಯಕ್ಷರಾದ ಬಿ.ಎಚ್.ಶಿವಣ್ಣ, ಮಂಜುನಾಥ್, ಸಹಕಾರ ಸಂಘದ ಅಧ್ಯಕ್ಷ ನಾಗರಾಜ್, ಗ್ರಾ.ಪಂ.ಅಧ್ಯಕ್ಷ ಕೆ.ಸಿ.ಮಂಜುನಾಥ್, ಮೇಲ್ವಿಚಾರಕ ಎಸ್.ಕೆ.ಅಭಿಲಾಷ್, ಕಾರ್ಯನಿರ್ವಹಣಾಧಿಕಾರಿ ಉಮಾ, ನಿರ್ದೇಶಕರಾದ ಬಿ.ಎಸ್.ಸ್ವಾಮಿ, ಕಿಟ್ಟಿ, ರಮೇಶ್, ಈರೇಗೌಡ, ಪಾರ್ವತಮ್ಮ, ರಾಚಯ್ಯ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net