ರೈತರಿಗೆ ಕೊಡಲೇ ಭೂಸ್ವಾಧೀನ ಪರಿಹಾರ ನೀಡಿ

k
ಅಳವಂಡಿಯಲ್ಲಿ ಹಮ್ಮಿಕೊಂಡಿದ್ದ ಏತ ನೀರಾವರಿ ಹೋರಾಟ ಸಮಿತಿಯ ಸಭೆಯಲ್ಲಿ ಸಮಿತಿ ಹೋಬಳಿ ಘಟಕ ಅಧ್ಯಕ್ಷ ಶರಣಪ್ಪ ಜಡಿ ಮಾತನಾಡಿದರು. ಪ್ರಮುಖರಾದ ದೇವಪ್ಪ, ಭಿಮರಡ್ಡಿ, ವೀರಣ್ಣ, ಶರಣಪ್ಪ, ಚಂದ್ರಪ್ಪ, ನಾಗಪ್ಪ, ಪರಣ್ಣ, ವಿರುಪಾಕ್ಷಿ, ಚಂದ್ರಗೌಡ ಇತರರಿದ್ದರು.
Published on

ಅಳವಂಡಿ: ಸರ್ಕಾರ ಅಳವಂಡಿ-ಬೆಟಗೇರಿ ಏತ ನೀರಾವರಿ ಯೋಜನೆಯ ಉಪ ಕಾಲುವೆಗೆ 110 ಎಕರೆ ಭೂಸ್ವಾಧೀನ ಪಡಿಸಿಕೊಂಡಿರುವುದಕ್ಕೆ 11 ಕೋಟಿ ರೂ. ಪರಿಹಾರ ನೀಡುತ್ತಿಲ್ಲ. ಶೀಘ್ರವೇ ಹಣ ನೀಡದಿದ್ದರೆ ಸತ್ಯಾಗ್ರಹ ನಡೆಸಲಾಗುವುದು ಎಂದು ಏತ ನೀರಾವರಿ ಯೋಜನೆಯ ಹೋರಾಟ ಸಮಿತಿ ಹೋಬಳಿ ಘಟಕ ಅಧ್ಯಕ್ಷ ಶರಣಪ್ಪ ಜಡಿ ಹೇಳಿದರು.


ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಹೋರಾಟ ಸಮಿತಿಯ ಸದಸ್ಯರ ಸಭೆಯಲ್ಲಿ ಗುರುವಾರ ಮಾತನಾಡಿದರು. ಏತ ನೀರಾವರಿ ಯೋಜನೆಗೆ ಕವಲೂರು, ಹಂದ್ರಾಳ, ಅಳವಂಡಿ, ಹಿರೇಸಿಂದೋಗಿ, ಮೈನಹಳ್ಳಿ, ಬಿಕನಳ್ಳಿ, ತಳಕಲ್, ಕೋಮಲಾಪುರ ಗ್ರಾಮಗಳ ರೈತರ ಜಮೀನು ಉಪ ಕಾಲುವೆ ನಿರ್ಮಾಣಕ್ಕೆ ಸ್ವಾಧೀನ ಪಡಿಸಿಕೊಳ್ಳಲಾಗಿದೆ. ಐದಾರು ವರ್ಷ ಕಳೆದರೂ ರೈತರಿಗೆ ಸೂಕ್ತ ಪರಿಹಾರ ನೀಡುವಲ್ಲಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಇದರಿಂದ ರೈತರು ತೊಂದರೆ ಅನುಭವಿಸುತ್ತಿದ್ದು, ಕೂಡಲೇ ಪರಿಹಾರ ನೀಡಬೇಕು ಎಂದರು.


ಪ್ರಮುಖರಾದ ನಾಗಪ್ಪ ಸವಡಿ, ದೇವಪ್ಪ ಕಟ್ಟಿಮನಿ, ಭಿಮರಡ್ಡಿ ಗದ್ದಿಕೇರಿ, ಜಗನ್ನಾಥರಡ್ಡಿ, ಚಂದ್ರಪ್ಪ ಜಂತ್ಲಿ, ಈಶಪ್ಪ ಜೋಳದ, ವೀರಣ್ಣ ಶೆಟ್ಟರ್, ಪರಪ್ಪ ನಾಗರಳ್ಳಿ, ಪ್ರಕಾಶ ಹೆಸರೂರು, ಗುರುಬಸವರಾಜ ಬೋಚನಹಳ್ಳಿ, ಬಸವರಡ್ಡಿ ಮೂಲಿಮನಿ, ಮಹಾಂತೇಶ, ಪ್ರಭುಗೌಡ, ಪುಟ್ಟರಾಜ, ಚಂದ್ರು ಮಾಲಿಪಾಟೀಲ, ಬಸವರಾಜ ಯರಾಶಿ, ಸಂಜೀವಗೌಡ, ದೇವಪ್ಪ, ವಿರುಪಾಕ್ಷಯ್ಯ, ಬಸವರಡ್ಡಿ, ಫಕೀರೇಶ, ಸುಭಾಸರಡ್ಡಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net